Log In
BREAKING NEWS >
ಸೆ.22ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೋಟಿತುಳಸಿ ಅರ್ಚನೆ ಕಾರ್ಯಕ್ರಮ ಜರಗಲಿದೆ...

ದುನಿಯಾ ವಿಜಯ್‌ಗೆ ಸಂಕಷ್ಟಗಳ ಮೇಲೆ ಸಂಕಷ್ಟ;ಮತ್ತೊಂದು ಚಾರ್ಜ್‌ ಶೀಟ್‌

ಬೆಂಗಳೂರು: ಕುಟುಂಬ ಕಲಹದಿಂದಾಗಿ ಠಾಣೆ ಮೇಟ್ಟಿಲೇರಿ ಕಂಗಾಲಾಗಿರುವ ನಟ ದುನಿಯಾ ವಿಜಯ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮಾಸ್ತಿ ಗುಡಿ ಚಿತ್ರೀಕರಣ ಸಂದರ್ಭ ನಟರಿಬ್ಬರ ಸಾವಿನ ಪ್ರಕರಣದಲ್ಲಿ  ನಿರ್ಮಾಪಕ ಸುಂದರ್‌ ಗೌಡ ಅವರು ಪರಾರಿಯಾಗಲು ಸಹಕಾರ ನೀಡಿದ ಪ್ರಕರಣದಲ್ಲಿ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು 65 ಪುಟಗಳ ಚಾರ್ಜ್‌ ಶೀಟ್‌ ಸಿದ್ಧಪಡಿಸಿ  2 ನೇ ಎಸಿಎಂಎಂ ಕೋರ್ಟ್‌ಗೆ  ಸಲ್ಲಿಸಿದ್ದಾರೆ.

ಸುಂದರ್‌ಗೌಡ ಅವರು ನಟರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಸುಂದರ್‌ಗೌಡ ಬಂಧನಕ್ಕೆ ತೆರಳಿದ್ದ ವೇಳೆ ದುನಿಯಾ ವಿಜಯ್‌ ದಬ್ಬಾಳಿಕೆ ನಡೆಸಿದ್ದರು. ಕೋರ್ಟ್‌ ಆದೇಶ ಉಲ್ಲಂಘನೆ ಮಾಡಿ , ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ದುನಿಯಾ ವಿಜಯ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಬಳಿಕ ವಿಜಯ್‌ ತಲೆ ಮರೆಸಿಕೊಂಡಿದ್ದರು. ನಂತರ ಬಂಧನಕ್ಕೊಳಗಾಗಿದ್ದ ವಿಜಯ್‌ ಜಾಮೀನು ಪಡೆದು ಹೊರ ಬಂದಿದ್ದರು.

No Comments

Leave A Comment