Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ಉಡುಪಿ:ರೈಲಿನಲ್ಲಿ ಸಾಗಿಸುತ್ತಿದ್ದ ದಾಖಲೆಯಿಲ್ಲದ 1.5 ಕೋಟಿ ರೂ ವಶಕ್ಕೆ

ಉಡುಪಿ: ಇಲ್ಲಿನ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ  ದಾಖಲೆ ರಹಿತವಾಗಿ  ಸಾಗಿಸುತ್ತಿದ್ದ 1.50 ಕೋ.ರೂಪಾಯಿ ಹಣವನ್ನು ಪೊಲೀಸ್‌ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮುಂಬೈನಿಂದ ಎರ್ನಾಕುಲಂಗೆ ಹೋಗುತ್ತಿದ್ದ ರೈಲಿನಲ್ಲಿ ರಾಜಸ್ಥಾನ ಮೂಲದ ಇಬ್ಬರು ಸಾಗಾಣಿಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕುಮಟಾ ಬಳಿ ರೈಲ್ವೇ ಪೊಲೀಸರು ಅನುಮಾನಗೊಂಡು ಪರಿಶೀಲನೆಗಿಳಿದಾಗ ಹಣವಿರುವುದು ಕಂಡು ಬಂದಿದೆ. ಬಳಿಕ ಉಡುಪಿ ನಿಲ್ದಾಣದಲ್ಲಿ ಇಬ್ಬರನ್ನು  ಇಳಿಸಿ ವಿಚಾರಣೆ ನಡೆಸಲಾಗುತ್ತಿದೆ.

ಇಬ್ಬರನ್ನೂ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ತಹಶಿಲ್ದಾರ್, ಪೊಲೀಸರಿಂದ ವಿಚಾರಣೆ ನಡೆಸಲಾಗುತ್ತಿದ್ದು ಹಣ  ಕಣ್ಣೂರಿಗೆ ಸಾಗಿಸಲಾಗುತ್ತಿತ್ತು ಎಂದು ಹೇಳಿರುವುದಾಗಿ ವರದಿಯಾಗಿದೆ.

ಹಿರಿಯ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ ನಂತರ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.

ಚುನಾವಣೆಗೆ ಸಂಬಂಧಿಸಿದ ಹಣವಿದ್ದರೆ ಮಾತ್ರ ನಾವು ವಶಕ್ಕೆ ಪಡೆಯುತ್ತೇವೆ ಎಂದು ಚುನಾವಣಾಧಿಕಾರಿಗಳು ಹೇಳಿಕೆ ನೀಡಿದ್ದಾರೆ.

No Comments

Leave A Comment