Log In
BREAKING NEWS >
ಆಗಸ್ಟ್ 18ರ ಭಾನುವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಸಮೂಹಿಕ ಚೂಡಿಪೂಜೆ ನಡೆಯಲಿದೆ.ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಕೋಟ:ಆ್ಯಂಬುಲೆನ್ಸ್ ಭೀಕರ ಅವಘಡ;3 ಬಲಿ,ಮೂವರು ಗಂಭೀರ

ಕೋಟ : ಇಲ್ಲಿನ  ಮಣೂರು ಮಹಾಲಿಂಗೇಶ್ವರ ದೇಗುಲದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ  ಶನಿವಾರ ನಸುಕಿನ 1.30 ರ ವೇಳೆ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್‌ ಹಾರಿ ಪಲ್ಟಿಯಾಗಿ ಭೀಕರ ಅವಘಡ ಸಂಭವಿಸಿದೆ. ಅವಘಡದಲ್ಲಿ ಆ್ಯಂಬುಲೆನ್ಸ್‌ನಲ್ಲಿ ದ್ದ ರೋಗಿ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆ್ಯಂಬುಲೆನ್ಸ್‌ನಲ್ಲಿ  ಕಾರವಾರದಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ರೋಗಿಯನ್ನು ಸಾಗಿಸಲಾಗುತ್ತಿತ್ತು.

ಆ್ಯಂಬುಲೆನ್ಸ್‌ ಡಿವೈಡರ್‌ ಹಾರಿ ಟ್ಯಾಂಕರ್‌ವೊಂದಕ್ಕೆ ಢಿಕ್ಕಿಯಾಗಿದೆ. ಟ್ಯಾಂಕರ್‌ನ ಭಾಗ ಜಖಂಗೊಂಡಿದೆ.

ಮೃತ ದುರ್ದೈವಿಗಳು ಕಾರವಾರದ ಆಮದಳ್ಳಿಯ ನಿವಾಸಿಗಳಾದ ಉಲ್ಲಾಸ್‌ ತಳೇಕರ್‌(45), ಅಶೋಕ್‌(37)ಮತ್ತು ಶೈಲೇಶ್‌ ಎಂದು ತಿಳಿದು ಬಂದಿದೆ.

ಅರವಿಂದ್‌, ಸರಿತಾ ಮತ್ತು ರಾಘವೇಂದ್ರ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment