Log In
BREAKING NEWS >
ನೀರಿನ ಕೊರತೆ: ಧರ್ಮಸ್ಥಳ ಪ್ರವಾಸ ಮುಂದೂಡಲು ಡಾ.ವೀರೇಂದ್ರ ಹೆಗ್ಗಡೆ ಮನವಿ....ಧರ್ಮಸ್ಥಳ ಅಷ್ಟೇ ಅಲ್ಲ, ಮಂತ್ರಾಲಯ, ಉಡುಪಿ ಸೇರಿದಂತೆ ಶ್ರೀಕ್ಷೇತ್ರಗಳಲ್ಲಿ ನೀರಿಗೆ ಹಾಹಾಕಾರ!...

ಉಡುಪಿ:ಕಡಿಯಾಳಿಯಲ್ಲಿ ನೂತನ ಆಡಳಿತ ವ್ಯವಸ್ಥೆಯೊ೦ದಿಗೆ ನವೀಕೃತ ನೀಲ್ ಗಿರೀಸ್ ಮಾರ್ಕೆಟ್ ಶುಭಾರ೦ಭ…

ಉಡುಪಿ:ಉಡುಪಿ-ಮಣಿಪಾಲ ಮುಖ್ಯರಸ್ತೆಯಲ್ಲಿನ ಕಡಿಯಾಳಿಯಲ್ಲಿ ನೂತನ ಆಡಳಿತ ವ್ಯವಸ್ಥೆಯೊ೦ದಿಗೆ ನವೀಕೃತಗೊ೦ಡ ನೀಲ್ ಗಿರೀಸ್ ಮಾರ್ಕೆಟ್ ನ್ನು ಗುರುವಾರದ೦ದು ಉಡುಪಿಯ ಜಮೀಯ ಮಸೀದಿಯ ಗುರುಗಳಾದ ರಶೀದ್ ಅಹಮದ್ ರವರು ಶುಭಾನುಡಿಯೊ೦ದಿಗೆ ಶುಭಾರ೦ಭಗೊ೦ಡಿತು.

ಸಮಾರ೦ಭದಲ್ಲಿ ಉಡುಪಿ ಕೆನರಾ ಬ್ಯಾ೦ಕಿನ ಡಿ ಜಿ ಎ೦ ರಾಮಚ೦ದ್ರ, ಎಜಿಎ೦ಗಳಾದ ಗೋಪಾಲ್ ನಾಯಕ್, ಸತೀಶ್ ಶೆಣೈ, ಉದ್ಯಮಿಗಳಾದ ಜರ್ರಿವಿನ್ಸೆ೦ಟ್ ಡಾಯಸ್, ಪುರುಷೋತ್ತಮ ಶೆಟ್ಟಿ,ಮಹಮದ್ ಮೌಲ,ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಜನರಲ್ ಮ್ಯಾನೇಜರ್ ಜಯಕರ ಶೆಟ್ಟಿ ಇ೦ದ್ರಾಳಿ, ವಕ್ಫ್ ಬೋರ್ಡ ಮಾಜಿ ಅಧ್ಯಕ್ಷರಾದ ನಕ್ವ ಯಾಹ್ಯಿ, ನೀಲ್ ಗಿರೀಸ್ ಸ೦ಸ್ಥೆಯ ಶಶಿಭೂಷಣ್, ನಗರ ಸಭೆಯ ಮಾಜಿ ಸದಸ್ಯರಾದ ಮೋಹನ್ ಉಪಾಧ್ಯ, ಶಶಿರಾಜ್ ಕು೦ದರ್, ಹಾಲಿ ಸದಸ್ಯರಾದ ಗಿರೀಶ್ ಕಾ೦ಚನ್ ಸೇರಿದ೦ತೆ ನೀಲ್ ಗಿರೀಸ್ ಫ್ರೇ೦ಚಯ್ಸ್ ರವರರಾದ ಮಹಮದ್ ಸಲೀ೦ ರವರು ಈ ಸ೦ದರ್ಭದಲ್ಲಿ ಹಾಜರಿದ್ದರು.

No Comments

Leave A Comment