Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ಪೌರತ್ವ ಮಸೂದೆ ವಿರೋಧಿಸಿ ಅಸ್ಸಾಂ ಬಂದ್‌: ರೈಲು, ಬಸ್ಸು ತಡೆ

ಗುವಾಹಟಿ : ಪೌರತ್ವ ಮಸೂದೆಯನ್ನು ವಿರೋಧಿಸಿ 46 ಸಂಘಟನೆಗಳು ನೀಡಿರುವ 12 ತಾಸುಗಳ ರಾಜ್ಯವ್ಯಾಪಿ ಬಂದ್‌ ಕರೆಯನ್ವಯ ಇಂದು ಅಸ್ಸಾಂ ನಲ್ಲಿ ಪ್ರತಿಭಟನಕಾರರು ರೈಲು ಹಳಿಗಳ ಮೇಲೆ ತಡೆಗಳನ್ನು ನಿರ್ಮಿಸಿ ಅಸ್ಸಾಂ ಆದ್ಯಂತ ರೈಲು ಸಂಚಾರಕ್ಕೆ ತೀವ್ರ ಬಾಧೆ ಉಂಟುಮಾಡಿದ್ದಾರೆ.

ಪ್ರತಿಭಟನಕಾರರು ರೈಲು ಹಳಿಗಳ ಮೇಲೆ ಕುಳಿತು ರೈಲ್‌ ರೋಕೋ ನಡೆಸುತ್ತಿದ್ದಾರೆ; ಹಾಗಿದ್ದರೂ ರೈಲುಗಳ ಸುಗಮ ಸಂಚಾರಕ್ಕಾಗಿ ಪ್ರತಿಭಟನಕಾರರನ್ನು ಹಳಿಗಳ ಮೇಲಿಂದ ತೆರವುಗೊಳಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನಕಾರರು ರಾಜ್ಯದ ಅನೇಕ ಕಡೆಗಳಲ್ಲಿನ ಮುಖ್ಯ ರಸ್ತೆಗಳಲ್ಲಿ ಟೈರ್‌ಗಳನ್ನು ಸುಟ್ಟು ವಾಹನ ಸಂಚಾರಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

No Comments

Leave A Comment