Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ ‘ದಿ ವಿಲನ್ ‘: 100 ಕೋಟಿ ಕ್ಲಬ್ ಸೇರುವ ನಿರೀಕ್ಷೆ!

ದಸರಾ ವಾರಾಂತ್ಯದಲ್ಲಿ ಬಿಡುಗಡೆಗೊಂಡ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ ದಿ ವಿಲನ್ ‘ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಗಾಂಧಿನಗರದ ಚಿತ್ರೋದ್ಯಮದ ಪಂಡಿತರ ಪ್ರಕಾರ ಶನಿವಾರದ ವರೆಗೂ ಜಿಎಸ್ ಟಿ ಮತ್ತು ಸೇವಾ ಶುಲ್ಕ ಸೇರಿದಂತೆ   ‘ ದಿ ವಿಲನ್ ಚಿತ್ರ ಒಟ್ಟಾರೆ ಕಲೆಕ್ಷನ್ 29 ಕೋಟಿ ರೂ. ಆಗಿದೆ.

ಭಾನುವಾರದವರೆಗೂ ಸುಮಾರು 40 ಕೋಟಿ ರೂ. ಬಾಚಿರುವ ಸಾಧ್ಯತೆ ಇದೆ.ಇದೇ ರೀತಿಯಲ್ಲಿ ಇನ್ನೇರಡು ಮೂರು ಕಲೆಕ್ಷನ್ ಮುಂದುವರೆದರೆ  100 ಕೋಟಿ ಕ್ಲಬ್ ಪ್ರವೇಶಿಸುವ ಸಾಧ್ಯತೆ ಇದೆ ಎಂದು ವಿತರಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪ್ರೇಮ್ ನಿರ್ದೇಶನದ  ‘ ದಿ ವಿಲನ್  ಹೊರ ರಾಜ್ಯಗಳಲ್ಲಿಯೂ  ಬಿಡುಗಡೆಯಾಗಿದ್ದು, ಹೈದರಾಬಾದ್ ಮತ್ತಿತರ ಕಡೆಗಳಲ್ಲಿ ಪ್ರದರ್ಶನ ಹೆಚ್ಚಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಡ್ನಿ, ಮತ್ತಿತರ ಕಡೆಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

No Comments

Leave A Comment