Log In
BREAKING NEWS >
ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಆಜಾದ್‌ ಹಿಂದ್‌ ಫೌಜ್‌ಗೆ 75;ಬೋಸ್‌ ನೆನೆದು ಭಾವುಕರಾದ ಪ್ರಧಾನಿ ಮೋದಿ

ಹೊಸದಿಲ್ಲಿ: ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಸ್ವಾತಂತ್ರ್ಯ ಹೋರಾಟಕ್ಕಾಗಿ  ಆಜಾದ್‌ ಹಿಂದ್‌ ಫೌಜ್‌ ಸ್ಥಾಪಿಸಿ 75 ವರ್ಷದ ನೆನಪಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನಡೆಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ನೇತಾಜಿಯವರನ್ನು ನೆನೆದು ಭಾವುಕರಾದರು.

ಸಾಮಾನ್ಯವಾಗಿ ಅಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ಮಾತ್ರ ಪ್ರಧಾನಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡುತ್ತಾರೆ. ಆದರೆ ಪ್ರಧಾನಿ ಮೋದಿ ವಿಶಿಷ್ಠವಾಗಿ ಸುಭಾಷ್‌ ಚಂದ್ರ ಬೋಸ್‌ಗೆ ಗೌರವ ಸಲ್ಲಿಸಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ಅವರು ಆಜಾದ್‌ ಹಿಂದ್‌ ಫೌಜ್‌ ಮ್ಯೂಸಿಯಂಗಾಗಿ ಶಿಲಾನ್ಯಾಸ ನೆರವೇರಿಸಿದರು.

1943 ರ ಅಕ್ಟೋಬರ್‌ 21 ರಂದು ಸುಭಾಷ್‌ ಚಂದ್ರ ಬೋಸ್‌ ಅವರು ಆಜಾದ್‌ ಹಿಂದ್‌ ಫೌಜ್‌ ನ್ನು ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟ ತೀವ್ರಗೊಳಿಸಿದ್ದರು. ಆಜಾದ್‌ ಹಿಂದ್‌ ಫೌಜ್‌ಗೆ ಇಂಡಿಯನ್‌ ನ್ಯಾಷನಲ್‌ ಆರ್ಮಿ ಎಂದೂ ಕರೆಯಲಾಗುತ್ತದೆ.

No Comments

Leave A Comment