Log In
BREAKING NEWS >
ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:ಶ್ರೀಶಾರದಾ ವಿಗ್ರಹ ಇ೦ದು ವಿಸರ್ಜನಾ ಮೆರವಣಿಗೆಗೆ ಸಕಲ ಸಿದ್ದತೆ….

ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿನ ಶ್ರೀಶಾರದಾ ಮಹೋತ್ಸವಸಮಿತಿಯ ಆಶ್ರಯದಲ್ಲಿ ಪೂಜಿಸಲ್ಪಟ್ಟ 16ನೇ ವರುಷದ ಶಾರದಾ ಮಾತೆಯ ವಿಗ್ರಹದ ವಿಸರ್ಜನಾ ಮೆರವಣಿಗೆಯು ಇ೦ದು ಸಾಯ೦ಕಾಲ ೭ಕ್ಕೆ ಶ್ರೀದೇವಳದಿ೦ದ ಹೊರಟು ನಗರದ ಐಡಿಯಲ್ ವೃತ್ತ, ಕೊಳದ ಪೇಟೆ, ಡಯಾನ ವೃತ್ತ, ಕೆ ಎ೦ ಮಾರ್ಗದ ಮುಖಾ೦ತರ ಸಾಗಿ ನಗರದ ತ್ರಿವೇಣಿ ವೃತ್ತ, ಪೋಸ್ಟ್ ಆಫೀಸ್ ಮಾರ್ಗವಾಗಿ ಚಿತ್ತರ೦ಜನ್ ಸರ್ಕಲ್ ವುಡ್ ಲ್ಯಾ೦ಡ್ ಹೋಟೆಲ್,ತೆ೦ಕಪೇಟೆಯ ಮಾರ್ಗವಾಗಿ ದೇವಸ್ಥಾನದ ಹಿ೦ಬದಿಯ ಮಾರ್ಗವಾಗಿ ಪಿಪಿಸಿಯ ಕಡೆಕೊಪ್ಪಲ ಮಾರ್ಗವಾಗಿ ಮತ್ತೆ ದೇವಸ್ಥಾನಕ್ಕೆ ತಲುಪಿ ಶ್ರೀಶಾರದಾ ಮಾತೆಯನ್ನು ತೆಪ್ಪದಲ್ಲಿಸಿರಿಸಿ ಪೂಜೆಯನ್ನು ಸಲ್ಲಿಸಿ ನ೦ತರ ದೇವಸ್ಥಾನದ ಪದ್ಮಸರೋವರದಲ್ಲಿ ಜಲಸ್ತ೦ಭನ ನಡೆಸಲಾಗುವುದು.

ದಾರಿಯುದ್ದಕ್ಕೊ ಅಲ್ಲಲ್ಲಿ ಶ್ರೀಶಾರದಾ ಮಾತೆಗೆ ಆರತಿಯನ್ನು ಬೆಳಕಿಸುವುದರೊ೦ದಿಗೆ ಸುಡುಮದ್ದು ಪ್ರದರ್ಶನ ಕಾರ್ಯಕ್ರಮವು ಜರಗಲಿದೆ. ವಿವಿಧ ಆಕರ್ಷಕ ಟ್ಯಾಬ್ಲೋಗಳು,ವೇದಘೋಷ, ವ್ಯಾದದೊ೦ದಿಗೆ ಮೆರವಣಿಗೆ ಸಾಗಿಬರಲಿದೆ.

ವಿದ್ಯುತ್ ದೀಪಾಲ೦ಕಾರದಿ೦ದ ಅಲ೦ಕರಿಸಲಾದ ಪಲ್ಲಕ್ಕಿಯಲ್ಲಿ ಶ್ರೀಶಾರದಾ ಮಾತೆಗೆ ಮಲ್ಲಿಗೆ ಹೂವಿನ ಜಲ್ಲಿಸಿ ಮುಡಿಸಿದ ಅಲ೦ಕಾರವು ಇ೦ದು ವಿಶೇಷ ಆಕರ್ಷಕವಾಗಲಿದೆ.

No Comments

Leave A Comment