Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಚಂದ್ರಬಾಬು ನಾಯ್ಡು ಬಂಟ,TDP ಎಂಪಿ ರಮೇಶ್‌ ನಿವಾಸಗಳ ಮೇಲೆ IT ದಾಳಿ

ಹೈದರಾಬಾದ್‌ : ತೆಲುಗು ದೇಶ ಪಕ್ಷದ ಸಂಸದ ಸಿ ಎಂ ರಮೇಶ್‌ ಅವರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿನ ನಿವಾಸಗಳ ಮೇಲೆ ಇಂದು ಶುಕ್ರವಾರ ಆದಾಯ ತೆರಿಗೆ ಇಲಾಖಾಧಿಕಾರಿಗಳು ದಾಳಿ ನಡೆಸಿರುವುದಾಗಿ ವರದಿಯಾಗಿದೆ.

ಹೈದರಾಬಾದ್‌ ಮತ್ತು ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಪೋಟ್ಲದುರ್ತಿ ಯಲ್ಲಿನ ಸಂಸದ ರಮೇಶ್‌ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಇದೇ ರೀತಿ ಐಟಿ ಅಧಿಕಾರಿಗಳು ರಮಲೇಶ್‌ ಅವರ ರಿತ್ವಿಕ್‌ ಪ್ರೋಜೆಕ್ಟ್ ಕಂಪೆನಿಯ ಕಾರ್ಯಾಲಯದ ಮೇಲೂ ದಾಳಿ ನಡೆಸಿದರು.

ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡ ಐಟಿ ದಾಳಿ ಈಗಲೂ ಮುಂದುವರಿದಿದೆ; ಸುಮಾರು 30 ಐಟಿ ಅಧಿಕಾರಿಗಳು ಈ ದಾಳಿಗಳಲ್ಲಿ ಭಾಗಿಯಾಗಿದ್ದಾರೆ.

ರಾಜ್ಯಸಭೆಯ ತೆಲುಗು ದೇಶಂ ಸದಸ್ಯರಾಗಿರುವ ರಮೇಶ್‌ ಅವರು ಈ ಐಟಿ ದಾಳಿ ವೇಳೆ ದಿಲ್ಲಿಯಲ್ಲಿ ಇದ್ದಾರೆ.

ಕಡಪ ಜಿಲ್ಲೆಯಲ್ಲಿನ ರಮೇಶ್‌ ಅವರ ನಿವಾಸದ ಮೇಲೆ ದಾಳಿ ನಡೆಸುವ ಮುನ್ನ ಐಟಿ ಅಧಿಕಾರಿಗಳು ಅಲ್ಲಿದ್ದ ರಮೇಶ್‌ ಅವರ ಸಹೋದರ ಸಿ ಎಂ ಸುರೇಶ್‌ ಅವರನ್ನು ಹೊರಗೆ ಹೋಗುವಂತೆ ಸೂಚಿಸಿದರು. ಬಳಿಕವೇ ಅವರು ಶೋಧ ಕಾರ್ಯಾಚರಣೆ ಕೈಗೊಂಡರು.

ರಮೇಶ್‌ ಅವರು ಆಂಧ್ರ ಪ್ರದೇಶ ಸಿಎಂ ಎನ್‌ ಚಂದ್ರಬಾಬು ನಾಯ್ಡು ಅವರ ಬಂಟನಾಗಿದ್ದಾರೆ. ಈ ಐಟಿ ದಾಳಿಗಳು ರಾಜಕೀಯ ಪ್ರೇರಿತವಾಗಿವೆ ಎಂದವರು ಟೀಕಿಸಿದ್ದಾರೆ. ಈ ದಾಳಿಗಳ ಹೊರತಾಗಿಯೂ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ತಮ್ಮ ಹೋರಾಟವನ್ನು ತಾನು ಮುಂದುವರಿಸುವುದಾಗಿಯೂ ಹೇಳಿದ್ದಾರೆ.

No Comments

Leave A Comment