Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಸ್ವ ಘೋಷಿತ ದೇವಮಾನವ ರಾಂಪಾಲ್ ಅಪರಾಧಿ: ಹರ್ಯಾಣದ ಕೋರ್ಟ್ ತೀರ್ಪು

ಹಿಸಾರ್(ಹರ್ಯಾಣ): ಸ್ವಯಂ ಘೋಷಿತ ದೇವಮಾನವ ರಾಂಪಾಲ್ ನನ್ನು ಎರಡು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿ ಹರ್ಯಾಣದ ಹಿಸಾರ್ ನ ನ್ಯಾಯಾಲಯ ಅಪರಾಧಿ ಎಂದು ಸಾಬೀತುಪಡಿಸಿದೆ.

ಶಿಕ್ಷೆಯ ಪ್ರಮಾಣ ಇದೇ ತಿಂಗಳು 16 ಅಥವಾ 17ರಂದು ಪ್ರಕಟವಾಗುವ ನಿರೀಕ್ಷೆಯಿದೆ.ಅಪಾರ ಅನುಯಾಯಿಗಳನ್ನು ಹೊಂದಿರುವ ರಾಂಪಾಲ್ ನನ್ನು ಹಿಸಾರ್ ನ ಕೇಂದ್ರ ಕಾರಾಗೃಹ-2ರಲ್ಲಿರಿಸಲಾಗಿದೆ.2015ರಲ್ಲಿ ಪೊಲೀಸರು ಮತ್ತು ರಾಂಪಾಲ್ ನ ಭಕ್ತರ ನಡುವೆ ತೀವ್ರ ವಾದ-ವಿವಾದಗಳು ನಡೆದ ನಂತರ ಕೊನೆಗೂ ರಾಂಪಾಲ್ ನನ್ನು ಬಂಧಿಸಲಾಗಿತ್ತು.

ಬಾರ್ವಾಲದಲ್ಲಿರುವ ರಾಂಪಾಲ್ ನ ಸತ್ಲೋಕ್ ಆಶ್ರಮದ ಹೊರಗೆ ನಾಲ್ವರು ಮಹಿಳೆಯರು ಮತ್ತು ಇಬ್ಬರು ಮಕ್ಕಳ ಶವ ಪತ್ತೆಯಾದ ಹಿನ್ನಲೆಯಲ್ಲಿ ರಾಂಪಾಲ್ ನನ್ನು ಬಂಧಿಸಲಾಗಿತ್ತು.

ಮತ್ತೊಂದು ಬಾರಿ ಆಶ್ರಮದಲ್ಲಿ  ಮತ್ತೊಬ್ಬ ಮಹಿಳೆಯ ಶವ ಸಿಕ್ಕಿದ ಹಿನ್ನಲೆಯಲ್ಲಿ ರಾಂಪಾಲ್ ವಿರುದ್ಧ ಮತ್ತೊಂದು ಕೇಸು ದಾಖಲಾಗಿತ್ತು.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ವೇಳೆ ಸುಮಾರು 80 ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಮಾಧ್ಯಮಗಳಲ್ಲಿ ಬಂದಿದೆ ಎಂದು ರಾಂಪಾಲ್ ಪರ ವಕೀಲ ಎಂಎಸ್ ನಾಯನ್ ತಿಳಿಸಿದ್ದಾರೆ.

No Comments

Leave A Comment