Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ನಾಳೆ ಸುಧಾ ಮೂರ್ತಿ ಚಾಲನೆ !

ಮೈಸೂರು:  ಚಾಮುಂಡಿ ಬೆಟ್ಟದಲ್ಲಿ  ನಾಳೆ ಬೆಳಗ್ಗೆ  7. 05 ರಿಂದ 7.35 ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ  ಲೇಖಕಿ ಹಾಗೂ ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ  ವಿಶ್ವ ವಿಖ್ಯಾತ ಮೈಸೂರು ದಸರಾ-2018 ಮಹೋತ್ಸವ ಉದ್ಘಾಟಿಸಲಿದ್ದಾರೆ.ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮತ್ತಿತರ ಗಣ್ಯರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಇದೇ ತಿಂಗಳ 19 ರಂದು  ಮಧ್ಯಾಹ್ನ 2-30 ರಿಂದ 3-16 ರೊಳಗೆ ಸಲ್ಲುವ ಕುಂಬ ಲಗ್ನದಲ್ಲಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ , ಅರಮನೆಯ ಉತ್ತರ ದ್ವಾರದಲ್ಲಿ ನಂದಿ ದ್ವಜದ ಪೂಜೆ ಸಲ್ಲಿಸಿ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ನಂತರ ಅರ್ಜುನ ಹೊತ್ತು ತರಲಿರುವ  750 ಕೆಜಿ ತೂಕದ ಬಂಗಾರದ ಅಂಬಾರಿಯಲ್ಲಿ ಬರುವ ನಾಡ ದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ  ಹೆಚ್. ಡಿ. ಕುಮಾರಸ್ವಾಮಿ  ಮಧ್ಯಾಹ್ನ 3-40 ರಿಂದ 4-10ರ ನಡುವೆ   ಪುಷ್ಪಾರ್ಚನೆ ಮಾಡಲಿದ್ದಾರೆ.

7ನೇ ಬಾರಿ ಅರ್ಜುನ ಅಂಬಾರಿ ಹೊರಲಿದ್ದಾನೆ. ಈತನ ಜತೆ ಅಭಿಮನ್ಯು, ಬಲರಾಮ, ವಿಕ್ರಮ, ವಿಜಯ, ಕಾವೇರಿ, ಗಜೇಂದ್ರ, ಗೋಪಾಲಕೃಷ್ಣ, ದುರ್ಗಾಪರಮೇಶ್ವರಿ, ಗೋಪಿ, ಪ್ರಕಾಶ್ ಹೆಜ್ಜೆ ಹಾಕಲಿದ್ದಾರೆ.

No Comments

Leave A Comment