Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಸನ್ನಿ ಲಿಯೋನ್‌ ವಿರುದ್ಧ ಪ್ರತಿಭಟನೆ

ಬೆಂಗಳೂರು: ನಟಿ ಸನ್ನಿ ಲಿಯೋನ್‌ “ವೀರ ಮಹಾದೇವಿ, ಚಿತ್ರದಲ್ಲಿನಟಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆ ಕಾರ್ಯಕರ್ತರು ಆನಂದರಾವ್‌ ವೃತ್ತದ ಗಾಂ- ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು.

ವೀರ ಮಹಾದೇವಿ ಚಿತ್ರ ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ವೀರ ರಾಣಿಯ ಚಿತ್ರದಲ್ಲಿನಟಿಸುತ್ತಿರುವ ಸನ್ನಿ ಲಿಯೋನ್‌ ನಾಡಿನ ಸಂಸ್ಕೃತಿಗೆ ಅಪಮಾನ ಮಾಡುತ್ತಿದ್ದಾರೆ. ಸನ್ನಿ ಅವರ ಬಗ್ಗೆ ಜನರಲ್ಲಿಬೇರೆಯದೇ ಅಭಿಪ್ರಾಯವಿದೆ. ಹೀಗಾಗಿ ಸಂಸ್ಕೃತಿ, ಇತಿಹಾಸಕ್ಕೆ ಸಂಬಂ-ಸಿದ ಕಥೆಯ ಚಿತ್ರದಲ್ಲಿನಟಿಸಲು ಅವರಿಗೆ ಅವಕಾಶ ನೀಡಬಾರದು ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಆಗ್ರಹಕ್ಕೆ ಮಣಿಯದೆ ನಟಿಸಲು ಅವಕಾಶ ಮಾಡಿಕೊಟ್ಟರೆ ರಾಜ್ಯದಲ್ಲಿಚಿತ್ರ ತೆರೆ ಕಾಣಲು ಬಿಡುವುದಿಲ್ಲಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಇದೇ ವೇಳೆ ನಟಿ ಸನ್ನಿ ಲಿಯೋನ್‌ ಹಾಗೂ ನಿರ್ಮಾಪಕ ವಾಡಿ ಉದಯನ್‌ ಪ್ರತಿಕೃತಿ ಸುಟ್ಟು ಪ್ರತಿಭಟಿಸಲಾಯಿತು.

No Comments

Leave A Comment