Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಮೈಸೂರಿನಲ್ಲಿ ಅನಾವರಣಗೊಳ್ಳಲಿದೆ ರಾಜ್ಯದ ಮೊದಲ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ

ಮೈಸೂರು: ಜಗತ್ತಿನ ಖ್ಯಾತ ವಿಖ್ಯಾತರ ಮೇಣದ ಪ್ರತಿಮೆಗಳಿಗೆ ಹೆಸರಾಗಿರುವ ಪ್ರತಿಷ್ಠಿತ ಮೇಡಮ್‌ ಟುಸ್ಸಾಡ್ಸ್  ಮಾಧರಿಯಲ್ಲೇ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂವೊಂದು ಶೀಘ್ರದಲ್ಲೇ ಮೈಸೂರಿನಲ್ಲಿ ಅನಾವರಣಗೊಳ್ಳಲಿದೆ. ಇದು ರಾಜ್ಯದ ಮೊದಲ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಎಂಬ ಗೌರವಕ್ಕೆ ಪಾತ್ರವಾಗಲಿದೆ.
ಇದೇ ಭಾನುವಾರ ಅರಮನೆ ನಗರಿಯಲ್ಲಿ ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಆರಂಭವಾಗುತ್ತಿದ್ದು, ಇದರಲ್ಲಿ ಸೆಲೆಬ್ರಿಟಿಗಳ ಹಾಗೂ ಜನಪ್ರಿಯ ವ್ಯಕ್ತಿಗಳ ಮೇಣದ ಪ್ರತಿಮೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಶಿಲ್ಪಿ ಹಾಗೂ ಕಲಾವಿದ ಉಮೇಶ್ ಶೆಟ್ಟಿ ಅವರ ಕನಸಿನ ಮ್ಯೂಸಿಯಂ ಇದಾಗಿದ್ದು, ಅವರ ಬಳಿ ಈಗಾಗಲೇ ವಿಶ್ವ ನಾಯಕರ, ನಟರ, ಕ್ರೀಡಾಪಟುಗಳ ಹಾಗೂ ಧಾರ್ಮಿಕ ಗುರುಗಳು ಸೇರಿದಂತೆ 50 ವ್ಯಕ್ತಿಗಳ ಮೇಣದ ಪ್ರತಿಮೆಗಳಿವೆ.
ಹೊನ್ನಾವರ ಮೂಲದ ಉಮೇಶ್ ಶೆಟ್ಟಿ ಅವರು, ಕಲೆಯಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದು, ಕಲಾ ಶಿಕ್ಷಕರಾಗಿ ಮುಂಬೈ ಮತ್ತು ಪುಣೆಯಲ್ಲಿ ಕೆಲಸ ಮಾಡಿದ್ದಾರೆ. ಈಗ ಮೇಣದ ಪ್ರತಿಮೆ ನಿರ್ಮಾಣದಲ್ಲಿ ತೊಡಗಿದ್ದಾರೆ.
ನಾನು ರಾಜ್ಯದಲ್ಲಿ ಒಂದು ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂ ಸ್ಥಾಪಿಸಬೇಕು ಎಂದು ನಿರ್ಧರಿಸಿದೆ ಮತ್ತು ಇದಕ್ಕಾಗಿ ಮೈಸೂರು ಅನ್ನು ಆಯ್ಕೆ ಮಾಡಿದೆ. ಏಕೆಂದರೆ ಮೈಸೂರಿಗೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ ಅಲ್ಲಿಯೇ ರಾಜ್ಯದ ಮೊದಲ ವ್ಯಾಕ್ಸ್ ಮ್ಯೂಸಿಯಂ ಸ್ಥಾಪಿಸುವ ನಿರ್ಧಾರಕ್ಕೆ ಬಂದೆ ಎಂದು ಉಮೇಶ್ ಶೆಟ್ಟಿ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಇದು ನನ್ನ ಎರಡು ವರ್ಷಗಳ ಕನಸು. ನನ್ನ ತಂಡದ 10-12 ಕಲಾವಿದರ ನಿರಂತರ ಶ್ರಮದ ಫಲವಾಗಿ ಈಗ ಕನಸು ನನಸಾಗುತ್ತಿದೆ ಎಂದಿದ್ದಾರೆ.
ಸದ್ಯ ಉಮೇಶ್ ಶೆಟ್ಟಿ ಅವರ ಬಳಿ ಪ್ರಧಾನಿ ನರೇಂದ್ರ ಮೋದಿ, ನಟರಾದ ಡಾ.ರಾಜ್ ಕುಮಾರ್, ರಜನಿಕಾಂತ್, ವಿಷ್ಣು ವರ್ಧನ್, ಶಂಕರ್ ನಾಗ್, ಪ್ರಭಾಶ್ ಮತ್ತು ಸರ್. ಎಂ.ವಿಶ್ವೇಶ್ವರಯ್ಯ, ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಸೇರಿದಂತೆ ಹಲವರ ಮೇಣದ ಪ್ರತಿಮೆಗಳಿವೆ.
No Comments

Leave A Comment