Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಸಂಗೀತ, ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಬೆಂಗಳೂರು: ಕರ್ನಾಟಕ ಸಂಗೀತನೃತ್ಯ ಅಕಾಡೆಮಿಯ 2018-19ನೇ ಸಾಲಿನ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ. ಅಕಾಡೆಮಿ ಅಧ್ಯಕ್ಷ ಫಯಾಜ್‌ ಖಾನ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.

”ಕರ್ನಾಟಕ ಕಲಾಶ್ರೀ ಗೌರವ ಪ್ರಶಸ್ತಿಗೆ ಹಾವೇರಿ ಜಿಲ್ಲೆ ಹಿರೇಕೆರೂರಿನ ಫಕೀರಪ್ಪ ತಾಂದಳೆ (ಹಿಂದೂಸ್ತಾನಿ ಸಂಗೀತ ) ಮತ್ತು ಕೊಪ್ಪಳದ ಸದಾಶಿವ ಪಾಟೀಲ್‌ (ಸುಗಮ ಸಂಗೀತ ) ಅವರನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಕರ್ನಾಟಕ ಕಲಾಶ್ರೀ ವಾರ್ಷಿಕ ಪ್ರಶಸ್ತಿಗೆ 14 ಮಂದಿ ಕಲಾವಿದರು ಹಾಗೂ ಕಲಾ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ 30 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 50 ಸಾವಿರ ನಗದು ಹಾಗೂ ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ನೀಡಿ ಗೌರವಿಸಲಾಗುವುದು,” ಎಂದು ಅಕಾಡೆಮಿ ರಿಜಿಸ್ಟ್ರಾರ್‌ ಅಶೋಕ್‌ ಎನ್‌.ಚಲವಾದಿ ಪ್ರಕಟಣೆ ತಿಳಿಸಿದ್ದಾರೆ.

ಕರ್ನಾಟಕ ಸಂಗೀತ : ಡಾ.ಬಿ.ಎನ್‌.ಜಯಶ್ರೀ, ಬೆಂಗಳೂರು (ಹಾಡುಗಾರಿಕೆ), ಎಚ್‌.ಎಸ್‌.ವೇಣುಗೋಪಾಲ್‌, ಬೆಂಗಳೂರು (ಕೊಳಲು), ಅನೂರು ಅನಂತಕೃಷ್ಣ ಶರ್ಮಾ, ಬೆಂಗಳೂರು (ಮೃದಂಗ), ಪಿ.ನಾರಾಯಣಸ್ವಾಮಿ, ಕೋಲಾರ (ಡೋಲು)

ಹಿಂದೂಸ್ತಾನಿ ಸಂಗೀತ : ಡಾ.ನಾಗರಾಜರಾವ್‌ ಹವಾಲ್ದಾರ್‌, ಬೆಂಗಳೂರು (ಗಾಯನ), ಸುಧಾಂಶು ಕುಲಕರ್ಣಿ, ಬೆಳಗಾವಿ (ಹಾರ್ಮೋನಿಯಂ), ಸೋಮಶೇಖರ ಪಾಟೀಲ್‌, ಕಲಬುರಗಿ (ತಬಲ)

No Comments

Leave A Comment