Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಪಕೋಡಾ ಅಂಗಡಿ ಮೇಲೆ ಐಟಿ ದಾಳಿ!

ಲೂಧಿಯಾನ: ಪ್ರಧಾನಿ ನರೇಂದ್ರ ಮೋದಿ ಪಕೋಡ ಮಾರುವುದು ಕೂಡ ಒಂದು ಉದ್ಯೋಗ ಎಂದು ಹೇಳಿಕೆ ನೀಡಿದ್ದನ್ನು ವಿಪಕ್ಷಗಳು ಟೀಕಿಸಿದ ಬೆನ್ನಲ್ಲೇ ಪಂಜಾಬ್‌ನ ಲೂಧಿಯಾನಾದ ಪಕೋಡಾ ಮಳಿಗೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಇಲ್ಲಿನ ಖ್ಯಾತ ಪಕೋಡಾ ಮಾರಾಟಗಾರ ಪನ್ನಾ ಸಿಂಗ್‌ರ ಅಂಗಡಿ ಮೇಲೆ ಐಟಿ ದಾಳಿ ನಡೆದಿದ್ದು, ಅವರ ಆಸ್ತಿಯ ಮಾಹಿತಿ ಕಲೆ ಹಾಕಲಾಗಿದೆ. ಹಲವು ತಂಡಗಳು ಸಿಂಗ್‌ರ ದಶಕಗಳಷ್ಟು ಹಳೆಯ ಪಕೋಡ ಮಳಿಗೆ ಮತ್ತು ಹೊಸ ಐಷಾರಾಮಿ ಮಳಿಗೆಗಳನ್ನು ಪರಿಶೀಲಿಸಿದೆ.

ಸಿಂಗ್‌ರ ಆದಾಯದ ಬಗ್ಗೆ ಸಂಶಯಗಳಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದು, ದಾಖಲೆ ಪರಿಶೀಲಿಸುತ್ತಿದ್ದೇವೆ ಎಂದು ಇಲಾಖೆ ತಿಳಿಸಿದೆ.

No Comments

Leave A Comment