Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಲೇಸರ್ ಭೌತಶಾಸ್ತ್ರದಲ್ಲಿ ಸಾಧನೆ ಮಾಡಿದ 3 ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಗರಿ

ಸ್ಟಾಕ್ ಹೋಮ್: 2018ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಪ್ರಕಟವಾಗಿದೆ. ಆರ್ಥರ್‌ ಆ್ಯಶ್‌ಕಿನ್‌, ಜೆರಾರ್ಡ್‌ ಮೌರೋ ಮತ್ತು ಡೊನ್ನಾ ಸ್ಟಿಕ್‌ ಲ್ಯಾಂಡ್‌  ಅವರುಗಳು ಈ ಸಾಲಿನ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ.

ಲೇಸರ್ ಭೌತಶಾಸ್ತ್ರೀಯ ಸಂಶೋಧನಾ ಕ್ಷೇತ್ರದಲ್ಲಿ ಈ ಮೂವರು ಸಾಧಿಸಿರುವ ಅಸಾಧಾರಣ ಪ್ರಗತಿಯನ್ನು ಗಮನದಲ್ಲಿರಿಸಿಕೊಂಡು ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು  ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್ ಸಯನ್ಸಸ್‌ ಹೇಳಿದೆ.

ಡೊನ್ನಾ ಸ್ಟಿಕ್‌ ಲ್ಯಾಂಡ್‌  ನೊಬೆಲ್ ಪ್ರಶಸ್ತಿ ಇತಿಹಾಸದಲ್ಲಿ ಭೌತಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಮೂರನೇ ಮಹಿಳೆಯಾಗಿದ್ದಾರೆ.

ಅತಿ ಸಣ್ಣ ಹಾಗೂ ಸೂಕ್ಷ್ಮಾಣು ಲೇಸರ್ ತಂತ್ರಜ್ಞಾನಅಭಿವೃದ್ದಿಪಡಿಸಿದ ಕಾರಣಕ್ಕೆ ನೊಬೆಲ್ ಪ್ರಶಸ್ತಿ ಸಂದಿದೆ.ಈ ಲೇಸರ್ ತಂತ್ರಜ್ಞಾನಕಣ್ಣು ಹಾಗೂ ದೇಹದ ಇತರೆ ಸೂಕ್ಷ್ಮ ಅಂಗಗಳ ಚಿಕಿತ್ಸೆಗೆ ಹೆಚ್ಚು ನೆರವಾಗಲಿದೆ.

No Comments

Leave A Comment