Log In
BREAKING NEWS >
ಅರ್ಧಕ್ಕೆ ನಿಂತ ಪರ್ಕಳ ರಾ. ಹೆದ್ದಾರಿ ಕಾಮಗಾರಿ: ಅಂಗಡಿ, ಮನೆಯೊಳಗೆ ಕೆಸರು ನೀರು....

ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಸಂಚು – ರಾಮನಗರದಲ್ಲಿ ಸೆರೆ ಸಿಕ್ಕ ಉಗ್ರರಿಂದ ಸ್ಫೋಟಕ ಮಾಹಿತಿ

ರಾಮನಗರ: ಬೌದ್ಧ ಧರ್ಮಗುರು ದಲೈಲಾಮಾ ಹತ್ಯೆಗೆ ಸಂಚು ರೂಪಿಸಲಾಗಿತ್ತು ಅನ್ನೋ ಭಯಾನಕ ಮಾಹಿತಿ ಎನ್‍ಐಎ ತನಿಖೆಯಿಂದ ಬಯಲಾಗಿದೆ.

ದಲೈಲಾಮಾ ಅವರನ್ನು ಮುಗಿಸಲು ರಾಜ್ಯದ ರಾಮನಗರದಲ್ಲೇ ಸಂಚು ರೂಪಿಸಿರುವುದಾಗಿ ಎನ್‍ಐಎ ನಡೆಸಿದ ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಪರಿಣಾಮ ಬೌದ್ಧ ಧರ್ಮಗುರು ದಲೈಲಾಮಾ ಪ್ರಾಣ ಉಳಿದಿದೆ.

2018ರ ಜನವರಿ 18ರಂದು ಬಿಹಾರದ ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಲೈಲಾಮಾ ಮತ್ತು ಬಿಹಾರ ರಾಜ್ಯಪಾಲರನ್ನು ಜೊತೆಯಲ್ಲೇ ಬಾಂಬ್ ಬಿಟ್ಟು ಉಡಾಯಿಸಲು ಸ್ಕೆಚ್ ರೂಪಿಸಿದ್ದರು. ಇದರ ಮಾಹಿತಿ ಅರಿತ ಎನ್‍ಐಎ ರಂಗಕ್ಕಿಳಿದು ಮೂವರನ್ನು ಅರೆಸ್ಟ್ ಮಾಡಿತ್ತು. ಇದು ವಿಫಲವಾದ ಬೆನ್ನಲ್ಲೇ ಲಾಮಾ ಹತ್ಯೆಗೆ ಮತ್ತೊಂದು ಸ್ಕೆಚ್ ಅನ್ನು ಕರ್ನಾಟಕದಲ್ಲಿ ರೂಪಿಸಲಾಗ್ತಿತ್ತು. ಅದರಲ್ಲೂ ರಾಮನಗರದ ಮನೆಯೊಂದರಲ್ಲಿ ಲಾಮಾ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಬೋಧ್‍ಗಯಾದಲ್ಲಿ ಬಂಧಿಸಲ್ಪಟ್ಟಿದ್ದ ಮೂವರು ಉಗ್ರರ ವಿಚಾರಣೆ ವೇಳೆ ರಾಮನಗರದಲ್ಲಿ ರೂಪಿಸಲಾಗ್ತಿದ್ದ ಸಂಚಿನ ಬಗ್ಗೆ ಬಾಯ್ಬಿಟ್ಟಿದ್ದರು.

ಕೂಡಲೇ ಸದ್ದಿಲ್ಲದೇ ಆಗಸ್ಟ್ 7ರಂದು ರಾಜ್ಯಕ್ಕೆ ಧಾವಿಸಿದ ಎನ್‍ಐಎ ತಂಡ, ರಾಮನಗರಕ್ಕೆ ತೆರಳಿ ಜೆಎಂಬಿ ಉಗ್ರ ಮುನೀರ್ ನನ್ನು ಯಶಸ್ವಿಯಾಗಿ ಬೇಟೆಯಾಡಿತ್ತು. ಮುನೀರ್ ನನ್ನು ವಶಕ್ಕೆ ಪಡೆದಿದ್ದರಿಂದ ಸಂಭವಿಸಬಹುದಾಗಿದ್ದ ಘನಘೋರ ದುರಂತವನ್ನ ಎನ್‍ಐಎ ತಪ್ಪಿಸಿತ್ತು. ಬಾಂಬ್ ಸ್ಫೋಟಿಸಿ ದಲೈಲಾಮಾ ಹತ್ಯೆಗೆ ಮುನೀರ್ ಸಂಚು ನಡೆಸಿದ್ದನು ಎನ್ನಲಾಗಿದೆ.

ಉಗ್ರರ ಸಂಚಿನ ಕುರಿತಂತೆ ಎನ್‍ಐಎಯಿಂದ ದೋಷಾರೋಪ ಪಟ್ಟಿ ಸಿದ್ಧಪಡಿಸಿದೆ. 1959ರಲ್ಲಿ ಚೀನಾದಿಂದ ಎದುರಾಗಿದ್ದ ಪ್ರಾಣಕಂಟಕದಿಂದ ಪಾರಾಗಲು ಟಿಬೆಟ್‍ನಿಂದ ದಲೈಲಾಮಾ ರಾತ್ರೋರಾತ್ರಿ ಆಶ್ರಯ ಅರಸಿ ಭಾರತಕ್ಕೆ ಬಂದಿದ್ದರು. ಶಾಂತಿಯ ನೆಲೆವೀಡು ಎಂದು ಭಾವಿಸಿ ಭಾರತದಲ್ಲಿಯೇ ಕಳೆದ 6 ದಶಕಗಳಿಂದ ನೆಲೆಸಿದ್ದಾರೆ. ಆದರೆ ಅಂತಹ ಭಾರತದಲ್ಲಿಯೇ ಆ ಶಾಂತಿ ಧೂತನ ಹತ್ಯೆಗೆ ಸಂಚು ನಡೆದಿರುವುದು ಬೆಳಕಿಗೆ ಬಂದಿದೆ.

No Comments

Leave A Comment