Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ರಮ್ಯಾ ವಯಸ್ಸಿನ ಬಗ್ಗೆ ಮಾತನಾಡಿದ್ರು ರಾಗಿಣಿ

ಬೆಂಗಳೂರು: ಇತ್ತೀಚೆಗಷ್ಟೆ ರಮ್ಯಾ ಕನ್ನಡ ಚಿತ್ರರಂಗಕ್ಕೆ ಬರಬೇಕು ಅಂತ ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದು, ಈ ಟ್ವೀಟ್ ಅನ್ನು ನಟಿ ರಾಗಿಣಿ ದ್ವಿವೇದಿ ಅವರು ರೀಟ್ವೀಟ್ ಮಾಡುವ ಮೂಲಕ ಇಬ್ಬರ ಮಧ್ಯೆ ಇರುವ ವೈಮನಸ್ಸು ಮಾಯವಾಯುತ್ತಾ ಅನ್ನೋ ಪ್ರಶ್ನೆಯೊಂದು ಮೂಡಿತ್ತು. ಈ ಬೆನ್ನಲ್ಲೇ ಇದೀಗ ರಾಗಿಣಿ ಅವರು ರಮ್ಯಾ ವಯಸ್ಸಿನ ಬಗ್ಗೆ ಮಾತನಾಡುವ ಮೂಲಕ ಇಬ್ಬರೂ ಸ್ನೇಹಿತರಾಗಿದ್ದಾರೆ ಅನ್ನೋದು ಸ್ಪಷ್ಟವಾಗಿದೆ.

View image on Twitter

ಹೌದು. ಯೂತ್ ಐಕಾನ್ ರಮ್ಯಾ ಎಂಬ ಟ್ವಿಟ್ಟರ್ ಅಕೌಂಟ್ ನಲ್ಲಿ ಅಭಿಮಾನಿ ಜೊತೆ ರಮ್ಯಾ ಇರೋ ಫೋಟೋವನ್ನು ಶೇರ್ ಮಾಡಲಾಗಿತ್ತು. ಈ ಫೋಟೋಗೆ ರಾಗಿಣಿ ರಿಟ್ವೀಟ್ ಮಾಡಿದ್ದು, ನಮ್ಮ ವಯಸ್ಸು ಮುಂದಕ್ಕೆ ಹೋದಂತೆ ರಮ್ಯಾ ಅವರ ವಯಸ್ಸು ಹಿಂದಕ್ಕೆ ಬರುತ್ತಿದೆ. ಹೀಗಾಗಿ ಅವರು ದಿನ ಕಳೆದಂತೆ ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರೆ ಅಂತ ಹೇಳಿದ್ದಾರೆ. ರಾಗಿಣಿ ರೀಟ್ವೀಟ್ ಗೆ ರಮ್ಯಾ ಕೂಡ ಪ್ರತಿಕ್ರಿಯಿಸಿದ್ದು, ಧನ್ಯಾವಾದಗಳು ರಾಗಿಣಿ ಅಂತ ಹೇಳಿದ್ದಾರೆ.

No Comments

Leave A Comment