Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಕೋಟೇಶ್ವರ: ಹಾವು ತಂದಿಟ್ಟ ಸಾವು: ಬೈಕ್ ಸವಾರ ದುರ್ಮರಣ

ಕುಂದಾಪುರ: ಕಾರು  ಹರಿದು ಬೈಕ್ ಸವಾರ ಮೃತಪಟ್ಟ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಕೋಟೇಶ್ವರ ಬಳಿಯ ಕಾಳಾವರದಲ್ಲಿ ನಡೆದಿದೆ. ಹಾಲಾಡಿ ನಿವಾಸಿ ಗಂಗಾಧರ (34) ಮೃತ ದುರ್ದೈವಿ.

ಹಾಲಾಡಿ- ಕೋಟೇಶ್ವರ ರಸ್ತೆಯ ಕಾಳಾವರದಲ್ಲಿ ಮಾರ್ಗ ಮಧ್ಯೆ ಹಾವು ಬಂತೆಂದು ಕಾರು ಚಾಲಕ ದಿಢೀರನೆ ಬ್ರೇಕ್  ಹಾಕಿದಾಗ ಹಿಂದಿನಿಂದ ಬರುತ್ತಿದ್ದ ಗಂಗಾಧರ ಬೈಕ್ ಕಾರಿಗೆ ಡಿಕ್ಕಿ ಹೊಡೆಯಿತು. ಇದೇ ಸಂದರ್ಭದಲ್ಲಿ ಅವರ ಹಿಂದಿನಿಂದ ಬಂದ ಮತ್ತೊಂದು ಕಾರು ಗಂಗಾಧರ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟರು ಎನ್ನಲಾಗಿದೆ.

ಮೃತ ಗಂಗಾಧರ ಅವರು ಹಾಲಾಡಿಯಲ್ಲಿ ಗ್ಯಾರೇಜ್ ಮಾಲಕ ರುದ್ರ ಆಚಾರ ಅವರ ಮಗನಾಗಿದ್ದು, ಎರಡು ವರ್ಷದ ಹಿಂದೆ ಮದುವೆಯಾಗಿದ್ದರು.

No Comments

Leave A Comment