Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಪ್ರಿನ್ಸಿಪಾಲ್‌ನಿಂದ ಹೇಯ ಕೃತ್ಯ;5ನೇ ಕ್ಲಾಸ್‌ ವಿದ್ಯಾರ್ಥಿನಿ ಗರ್ಭಿಣಿ

ಪಾಟ್ನಾ: ಅತ್ಯಂತ ಹೇಯ ಘಟನೆಯೊಂದರಲ್ಲಿ ಫ‌ುಲ್ವಾರಿ ಷರಿಫ್ ಎಂಬಲ್ಲಿ  ಶಾಲಾ ಪ್ರಿನ್ಸಿಪಾಲ್‌ ಒಬ್ಬ  5 ನೇ ತರಗತಿಯ ವಿದ್ಯಾರ್ಥಿನಿ ಮೇಲೆ 9 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದು , ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಾಳೆ.

ಕೃತ್ಯ ಎಸಗಿದ ಪ್ರಿನ್ಸಿಪಾಲ್‌ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.ಪ್ರಿನ್ಸಿಪಾಲ್‌ನ ಹೇಯ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದ  ಕ್ಲರ್ಕ್‌ನನ್ನೂ  ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕಿಯ ಆರೋಗ್ಯದಲ್ಲಿ ಬದಲಾವಣೆ ಆದ ಬಳಿಕ ಆಕೆಯನ್ನು ವೈದ್ಯರ ಬಳಿ ಕರೆದೊಯ್ದಾಗ ಆಕೆ 2 ತಿಂಗಳ ಗರ್ಭಿಣಿ ಎನ್ನುವ ವಿಚಾರ ತಿಳಿದು ಬಂದಿದೆ. ಬಾಲಕಿಗೆ ಗುರುವಾರ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.

ಪೋಸ್ಕೋ ಕಾಯಿದೆ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

No Comments

Leave A Comment