Log In
BREAKING NEWS >
ವಿಶ್ವಯೋಗ ದಿನಾಚರಣೆಯ ಅ೦ಗವಾಗಿ ಶುಕ್ರವಾರದ೦ದು ವಿವಿದೆಡೆಯಲ್ಲಿ ಸ್ಥಳೀಯ ಸ೦ಘ-ಸ೦ಸ್ಥೆಯ ಆಶ್ರಯದಲ್ಲಿ ಯೋಗ ಪ್ರದರ್ಶನ ಕಾರ್ಯಕ್ರಮ ಜರಗಲಿದೆ.....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಅಶಕ್ತರಿಗೆ ನೆರವಾಗಲು ಹುಲಿ ವೇಷ ಹಾಕಿದ ಯುವತಿಯರು

ಪಡುಬಿದ್ರಿ : ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ಟೀಂ ಟೈಗರ್‌ ಗರ್ಲ್ಸ್‌ ಉಡುಪಿ ತಂಡದ  10 ಮಂದಿ ಯುವತಿಯರು ಇದೀಗ ಹುಲಿವೇಷ ಧರಿಸಿದ್ದಾರೆ. ಇವರ ಹುಲಿವೇಷ ತಂಡ ಮೂರು ದಿನಗಳ ಕಾಲ ಉದ್ಯಾವರ, ಕಟಪಾಡಿ, ಶಂಕರಪುರ, ಮಣಿಪಾಲ, ಉಡುಪಿ, ಮಲ್ಪೆ ಮತ್ತಿತರೆಡೆಗಳಲ್ಲಿ ಸಂಚರಿಸಲಿದೆ. ಜತೆಗೆ ಸಂಗ್ರವಾಗುವ ಹಣವನ್ನು ವಿದ್ಯಾರ್ಥಿನಿಯೋರ್ವಳ ಶಸ್ತ್ರಚಿಕಿತ್ಸೆಗೆ ಮತ್ತು ಬಡ ಕುಟುಂಬವೊಂದಕ್ಕೆ ನೀಡಲಿದ್ದಾರೆ.

ಜಿ. ಅಮೀನ್‌ ನೇತೃತ್ವದಲ್ಲಿ ಪಿಯು ವಿದ್ಯಾರ್ಥಿನಿಯರ ಈ ತಂಡ 2 ಲಕ್ಷ ರೂ.ಗಳಿಗೆ ಮಿಕ್ಕಿ ಹಣ ಸಂಗ್ರಹದ ಗುರಿ ಹಾಕಿಕೊಂಡಿದೆ. ಲಘು ಆಹಾರ ಸೇವಿಸಿ ಮೂರು ದಿನ ನಿರಂತರ, ತಂಡ ತಿರುಗಾಟ ನಡೆಸಲಿದೆ.

No Comments

Leave A Comment