Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ಫೆ.20ರಿಂದ 24: 2019 ಏರೋ ಇಂಡಿಯಾ ಬೆಂಗಳೂರಿನಲ್ಲೇ,ಲಕ್ನೋದಲ್ಲಿ ಅಲ್ಲ

ಹೊಸದಿಲ್ಲಿ : 2019ರ ಏರೋ ಇಂಡಿಯಾ ಫೆಬ್ರವರಿ 20ರಿಂದ 24ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ; ಲಕ್ನೋದಲ್ಲಿ ಅಲ್ಲ ಎಂಬುದೀಗ ಖಚಿತವಾಗಿದೆ.

2019ರ ಏರ್‌ ಇಂಡಿಯಾ ಶೋ ಗೆ ಸರಕಾರ ಬೆಂಗಳೂರನ್ನೇ ಆತಿಥೇಯ ನಗರವನ್ನಾಗಿ ಉಳಿಸಿಕೊಳ್ಳಲು ನಿರ್ಧರಿಸಿದೆ. ಈ ಹಿಂದಿನ ವರದಿಗಳ ಪ್ರಕಾರ 2019ರ ಏರ್‌ ಶೋ ಲಕ್ನೋದಲ್ಲಿ ನಡೆಯುವುದೆಂದು ಹೇಳಲಾಗಿತ್ತು.

ಐದು ದಿನಗಳ ಈ ಏರೋ ಇಂಡಿಯಾ ಶೋ ನಲ್ಲಿ  ಏರೋಸ್ಪೇಸ್‌ ಮತ್ತು ರಕ್ಷಣಾ ಕೈಗಾರಿಕೆಗಳ ಪ್ರಮುಖ ವಾಣಿಜ್ಯ ಪ್ರದರ್ಶನ ನಡೆಯಲಿದ್ದು ಅದರ ಜತೆಗೆ ಸಾರ್ವಜನಿಕರಿಗೆ ಮೈನವಿರೇಳಿಸುವ ಏರ್‌ ಶೋ ನಡೆಯಲಿದೆ.

ದೇಶೀಯ ವಾಯು ಯಾನ ಕೈಗಾರಿಕೆಗೆ ಈ ಕಾರ್ಯಕ್ರಮವು ಮಹತ್ವದ ಬೂಸ್ಟ್‌ ನೀಡಲಿದೆಯಲ್ಲದೆ ಕೇಂದ್ರ ಸರಕಾರದ ಮೇಕ್‌ ಇನ್‌ ಇಂಡಿಯಾ ಯೋಜನೆಗ ವಿಶೇಷ ಪ್ರಾಮುಖ್ಯ ನೀಡಲಿದೆ.

ಬೆಂಗಳೂರಿನಲ್ಲಿ  1996ರಲ್ಲಿ ಏರೋ ಇಂಡಿಯಾ ಮೊದಲ ಆವೃತ್ತಿ ನಡೆದಿತ್ತು. ಕಳೆದ ತಿಂಗಳಲ್ಲಿ ಇದನ್ನು  ಉತ್ತರ ಪ್ರದೇಶದ ಲಕ್ನೋಗೆ ವರ್ಗಾಯಿಸಲಾಗುವುದೆಂಬ ವಿವಾದ ಸೃಷ್ಟಿಯಾಗಿತ್ತು.

No Comments

Leave A Comment