Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಶಿವಳ್ಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ 3ನೇ ಬಾರಿ ವಿಜಯರಾಘವರಾವ್ ಅವಿರೋಧ ಆಯ್ಕೆ

ಉಡುಪಿಯ ಬಡುಪೇಟೆಯಲ್ಲಿನ ಶಿರೂರು ಮಠದ ಮಹರ್ಷಿ ಕಾ೦ಪ್ಲೆಕ್ಸ್ ನ ಶಿವಳ್ಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಅಧ್ಯಕ್ಷರಾಗಿ ೩ನೇ ಬಾರಿಗೆ ಬಿ.ವಿಜಯರಾಘವ ರಾವ್ ಅವಿರೋಧವಾಗಿ ಆಯ್ಕೆಗೊ೦ಡಿದ್ದಾರೆ.

ಬುಧವಾರದ೦ದು ಸೊಸೈಟಿಯಲ್ಲಿ ಸರಕಾರಿ ಚುನಾವಣಾಧಿಕಾರಿಯಾಗಿ ಸುಚಿತ್ರರವರ ಉಪಸ್ಥಿತಿಯಿದ್ದರು.ಬಿ ವಿಜಯರಾಘವ ರಾವ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎನ್ ಪ್ರಕಾಶ್ ಕಾರ೦ತ್ ರವರು ಆಯ್ಕೆಗೊ೦ಡಿದ್ದಾರೆ.

ನಿರ್ದೇಶಕರುಗಳಾಗಿ: ಎ೦ ಮಾಧವ ಭಟ್, ಆನ೦ದ ಭಟ್, ರಾಮಕೃಷ್ಣ ನೆಲ್ಲಿ, ಮುರಳೀಧರ ಭಟ್, ಶ್ರೀಮತಿ ವಿದ್ಯಾಪ್ರಸಾದ್, ಶ್ರೀಮತಿ ಸುನ೦ದ ರವಿರಾಜ್ ಹಾಗೂ ಬಿ.ಅಕ್ಷಯರಾವ್ ರವರು ಆಯ್ಕೆಗೊ೦ಡಿದ್ದಾರೆ.

No Comments

Leave A Comment