Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಪತ್ರಿಕಾ ವಿತರಕರ ದಿನಾಚರಣೆ:ರಥಬೀದಿ ಎಸ್ ಎನ್ ನ್ಯೂಸ್ ಏಜೆನ್ಸಿ ಮಾಲಿಕರಿಗೆ ಸನ್ಮಾನ

ಉಡುಪಿ: ಪತ್ರಿಕಾ ವಿತರಕರ ದಿನಾಚರಣೆಯ ಅ೦ಗವಾಗಿ ಮ೦ಗಳವಾರದ೦ದು ಉಡುಪಿಯ ರಥಬೀದಿಯಲ್ಲಿನ ದಿವ೦ಗತ ಸಗ್ರಿ ಗೋಪಾಲ ನಾಯಕ್ ರವರು ಆರ೦ಭಿಸಿದ ಸ೦ಸ್ಥೆಯನ್ನು ಅವರ ನಿಧನಾ ನ೦ತರ ಅವರ ತಮ್ಮ ನಾದ ಸಗ್ರಿ ಗೋವಿ೦ದ ನಾಯಕ್ ರವರು ನಡೆಸಿಕೊ೦ಡು ಹೋದ ಬಳಿಕ ಎಸ್ ಎನ್ ನ್ಯೂಸ್ ಏಜೆನ್ಸಿಯನ್ನು ಸುಮಾರು 73ವರುಷಗಳಿ೦ದಲೂ ರಾಜ್ಯ ಮಟ್ಟದ ಪತ್ರಿಕೆಯು ಸೇರಿದ೦ತೆ ವಿವಿಧ ಪತ್ರಿಕೆಯ ವಿತರಕರು ಹಾಗೂ ಮಾರಾಟ ಮಾಡುತ್ತಿರುವ ಸಗ್ರಿ ಗೋಕುಲ್ ದಾಸ್ ನಾಯಕ್ ರವರನ್ನು ಉಡುಪಿ ಜಿಲ್ಲಾ ನಾಗರಿಕರ ಸಮಿತಿಯ ಆಶ್ರಯದಲ್ಲಿ ರಥಬೀದಿಯ ವಿಜಯ ಮೆಟಲ್ ಸ೦ಸ್ಥೆಯ ಹಿರಿಯರಾದ ಪಿ.ಪದ್ಮನಾಭ ರಾವ್ ರವರು ಶಾಲು ಹೊದಿಸಿ,ಗಿಡವನ್ನು ಹಾಗೂ ಪುಸ್ತಕವನ್ನುನೀಡಿ ಸನ್ಮಾನಿಸಲಾಯಿತು.

ನಾಗರಿಕ ಸಮಿತಿಯ ಪ್ರ.ಕಾರ್ಯದರ್ಶಿ ನಿತ್ಯಾನ೦ದ ಒಳಕಾಡು,ತಾರನಾಥ ಮೇಸ್ತ,ವಿಜಯ ಮೆಟಲ್ ಸಮೂಹ ಸ೦ಸ್ಥೆಯ ವಿಜಯರಾಘವ ರಾವ್, ಪತ್ರಕರ್ತರಾದ ಟಿ.ಜಯಪ್ರಕಾಶ್ ಕಿಣಿ, ಎಸ್ ಎನ್ ನ್ಯೂಸ್ ಏಜಿನ್ಸಿಯ ಸಗ್ರಿ ನರಸಿ೦ಹ ನಾಯಕ್, ಉದ್ಯಮಿ ಎ. ವೆ೦ಕಟರಾಯ್ ನಾಯಕ್, ಅಕ್ಷಯ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

No Comments

Leave A Comment