Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ಟಿಎಂಸಿ ಸಂಸದನಿಂದ ಮಾನಹಾನಿ ದಾವೆ: ಶಾಗೆ ಕೋಲ್ಕತ ಕೋರ್ಟ್‌ ಸಮನ್ಸ್‌

ಕೋಲ್ಕತ : ತೃಣಮೂಲ ಕಾಂಗ್ರೆಸ್‌ ಸಂಸದ ದಾಖಲಿಸಿರುವ ಕ್ರಿಮಿನಲ್‌ ಮಾನಹಾನಿ ದಾವೆಗೆ ಸಂಬಂಧಿಸಿ ಸೆ.28ರಂದು ತನ್ನ ಮುಂದೆ ಹಾಜರಾಗುವಂತೆ ಇಲ್ಲಿನ ಮ್ಯಾಜಿಸ್ಟ್ರೇಟರ ನ್ಯಾಯಾಲಯ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ಸಿಎಂ ಮಮತಾ ಬ್ಯಾನರ್ಜಿ ಸೋದರ ಸಂಬಂಧಿ, ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ‘ಅಮಿತ್‌ ಶಾ ಅವರು ಸಾರ್ವಜನಿಕ ಭಾಷಣದಲ್ಲಿ ತನ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ’ ಎಂದು ಆರೋಪಿಸಿ ಕ್ರಿಮಿನನಲ್‌ ಮಾನಹಾನಿ ದಾವೆ ದಾಖಲಿಸಿದ್ದರು.

ಕಳೆದ ಆ.13ರಂದು ಅಭಿಷೇಕ್‌ ಅವರು ಅಮಿತ್‌ ಶಾ ಗೆ ಲೀಗಲ್‌ ನೊಟೀಸ್‌ ಜಾರಿ ಮಾಡಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದರು. ಇಲ್ಲದಿದ್ದರೆ ತಾನು ಕ್ರಿಮಿನಲ್‌ ಮಾನಹಾನಿ ದಾವೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು.

No Comments

Leave A Comment