Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಉಡುಪಿ, ಮಣಿಪಾಲ: ಹೊಂಡಗಳ ಹೆಚ್ಚಳ

ಉಡುಪಿ: ಇತ್ತೀಚೆಗೆ ಸುರಿದ ಭಾರೀ ಮಳೆಗೆ ನಗರದ ರಸ್ತೆಗಳಲ್ಲಿ ಉಂಟಾಗಿರುವ ಹೊಂಡಗಳು ದಿನಗಳೆದಂತೆ ಆಳ, ವಿಸ್ತಾರವಾಗುತ್ತಿವೆ. ನಗರಸಭೆ ಚುನಾವಣೆ ಕಡೆಗೆ ಗಮನ ಕೇಂದ್ರೀಕರಿಸಿರುವ ಅಧಿಕಾರಿಗಳು ಹೊಂಡಗಳನ್ನು ನಿರ್ಲಕ್ಷಿಸಿದ್ದಾರೆಯೇ ಎಂಬ ಸಂದೇಹ ಸಾರ್ವಜನಿಕರನ್ನು ಕಾಡುತ್ತಿದೆ.


ಡಯಾನ ಸರ್ಕಲ್‌ ಬಳಿ ಇರುವ ಹೊಂಡಗಳು ದ್ವಿಚಕ್ರ ವಾಹನ ಸವಾರರು, ಇತರ ವಾಹನಗಳ ಸವಾರರಿಗೂ ಸವಾಲಾಗಿವೆ. ಪಾದಚಾರಿಗಳು ಕೂಡ ಸಂಕಷ್ಟಪಡುವಂತಾಗಿದೆ. ಕೋರ್ಟ್‌ ಎದುರಿನ ರಸ್ತೆ, ಕಿನ್ನಿಮೂಲ್ಕಿ ರಸ್ತೆಯ ಹೊಂಡಗಳಿಗೂ ಮುಕ್ತಿ ಕಾಣಿಸಬೇಕಾಗಿದೆ. ವಾಹನಗಳ ಅತಿಯಾದ ಓಡಾಟದಿಂದ ನಲುಗಿ ಹೋಗಿರುವ ಬನ್ನಂಜೆ – ಬ್ರಹ್ಮಗಿರಿ ರಸ್ತೆ ಕೂಡ ದುರಸ್ತಿ, ಅಭಿವೃದ್ಧಿಯನ್ನು ಎದುರು ನೋಡುತ್ತಿದೆ. ಮಣಿಪಾಲದಲ್ಲಿ ರಾ.ಹೆದ್ದಾರಿ 66ರ ದುಸ್ಥಿತಿ ಮುಂದುವರಿದಿದೆ. ಮಳೆ ಬಿಡುವು ನೀಡಿದಾಗ ಅಧಿಕಾರಿಗಳು ಕಾರ್ಯಪ್ರವೃತ್ತರಾದರೆ ತಾತ್ಕಾಲಿಕ ಪರಿಹಾರವಾದರೂ ದೊರೆತೀತು ಎಂಬುದು ನಾಗರಿಕರ ಆಶಯ.

No Comments

Leave A Comment