Log In
BREAKING NEWS >
ಅಧಿಕಾರಾವಧಿ ಕೊನೆಗೊಳ್ಳುವ ಮೊದಲೇ ಆರ್ ಬಿಐ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ರಾಜೀನಾಮೆ!....

ಏಷ್ಯನ್ ಗೇಮ್ಸ್ ನಲ್ಲಿ ಮುಂದುವರೆದ ಪದಕ ಬೇಟೆ: 4 ಚಿನ್ನ, 3 ಬೆಳ್ಳಿ, 8 ಕಂಚಿನ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳು

ಜಕಾರ್ತಾ ಏಷ್ಯನ್ ಗೇಮ್ಸ್ 2018 ರಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದು, ವಿವಿಧ ವಿಭಾಗಗಳಲ್ಲಿ ಒಟ್ಟು 15 ಪದಕಗಳನ್ನು ಗೆದ್ದಿದೆ.

ಶೂಟರ್ ರಾಹಿ ಚಿನ್ನದ ಪದಕ ಹಾಗೂ ವೂಶೂ ಕ್ರೀಡಾ ಪಟುಗಳು ನಾಲ್ಕು ಕಂಚಿನ ಪದಕ ಗೆದ್ದಿದ್ದು,  ಒಟ್ಟಾರೆ 4 ಚಿನ್ನದ ಪದಕ, 3 ಬೆಳ್ಳಿ ಪದಕ, ಹಾಗೂ 8 ಕಂಚಿನ ಪದಕ ಸೇರಿದಂತೆ  ಆ.22 ರಂದು ಭಾರತ ತನ್ನ ಮುಡಿಗೇರಿಸಿಕೊಂಡ ಒಟ್ಟು ಪದಕಗಳ ಸಂಖ್ಯೆ 15 ಕ್ಕೆ ಏರಿಕೆಯಾಗಿದೆ.

ಪಂದ್ಯದಲ್ಲಿ ಮಹಿಳೆಯರ  25 ಮಿ ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೊಬಾತ್  ಚಿನ್ನದ ಪದಕ ಗಳಿಸಿಕೊಂಡಿದ್ದು ಏಷ್ಯಾನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

No Comments

Leave A Comment