Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಏಶ್ಯನ್ ಗೇಮ್ಸ್ ; ಏರ್ ರೈಫಲ್ ಶೂಟಿಂಗ್ ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ

ಜಕಾರ್ತಾ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ ದೊರೆತಿದೆ. 10 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.

ಸೋಮವಾರ ನಡೆದ ಪುರುಷರ 10 ಮೀಟರ್ ಏರ್ ರೈಫಲ್ ಶೂಟಿಂಗ್ ನ ಅಂತಿಮ ಸುತ್ತಿನಲ್ಲಿ ಭಾರತದ ದೀಪಕ್ ಕುಮಾರ್ ಅವರು 247.7 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚೀನಾದ ಯಾಂಗ್ ಹಾರಾನ್ 249.1 ಅಂಕಗಳಿಸಿ ಚಿನ್ನದ ಪದಕಗಳಿಸಿದರೆ, ಚೀನಾ ತೈಪಿಯ ಶಾವೊಕುವಾನ್ 226.8 ಅಂಕಗಳಿಸಿ ಕಂಚಿನ ಪದಕಕ್ಕೆ ಭಾಜನರಾದರು. ಅಲ್ಲದೇ ಭಾರತದ ಮತ್ತೊಬ್ಬ ಆಟಗಾರರಾದ ರವಿಕುಮಾರ್ ರವರು 205.2 ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟರು.

ಏಶ್ಯನ್ ಗೇಮ್ಸ್ ನಲ್ಲಿ ಹರ್ಯಾಣದ ಜಗಜಟ್ಟಿ 24ರ ಹರೆಯದ ಭಜರಂಗ್ ಪೂನಿಯ ಬಂಗಾರದ ಪದಕ ಗಳಿಸುವ ಮೂಲಕ ಖಾತೆ ತೆರೆದಿದ್ದರು.

No Comments

Leave A Comment