Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಕುದುರೆಮುಖ ಹೆದ್ದಾರಿಗೆ ಗುಡ್ಡ ಕುಸಿತ; ಚಾರ್ಮಾಡಿಯಲ್ಲೂ ಮಳೆ ಅಡ್ಡಿ

ಕುದುರೆಮುಖ: ರಾಷ್ಟ್ರೀಯ ಹೆದ್ದಾರಿ 169 ರಲ್ಲಿ  ಭಾನುವಾರ ಬೆಳಗ್ಗೆ  ದೊಡ್ಡ ಗುಡ್ಡ ಕುಸಿದು ಬಿದ್ದ ಹಿನ್ನಲೆಯಲ್ಲಿ  ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮೂಡಿಗೆರೆ -ಕಳಸ ಭಾಗದಿಂದ ಕುದುರೆಮುಖಕ್ಕೆ ಆಗಮಿಸಿ ಮಂಗಳೂರಿಗೆ ಸಂಚಾರ ಕಲ್ಪಿಸುತ್ತಿದ್ದ  ಹೆದ್ದಾರಿಯಲ್ಲಿ ಸಂಪೂರ್ಣ ಸಂಚಾರ ಅಸ್ತವ್ಯಸ್ತವಾಗಿದೆ.

ಕುದುರೆ ಮುಖ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ.

ಚಾರ್ಮಾಡಿಯಲ್ಲೂ ಪರದಾಟ
ಭಾರೀ ಸಂಖ್ಯೆಯ ವಾಹನಗಳು ಸಂಚರಿಸುತ್ತಿರುವ ಕಾರಣ ಮತ್ತು ಮಳೆ ಮುಂದುವರಿದ ಕಾರಣ ಸಾವಿರಾರು ವಾಹನ ಸವಾರರು ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆಯೂ ಪರದಾಡಬೇಕಾಯಿತು. ಟ್ರಾಫಿಕ್‌ ಜಾಮ್‌ ಉಂಟಾಗಿ ಕಿಲೋ ಮೀಟರ್‌ವರೆಗೆ ವಾಹನಗಳು ನಿಂತುಕೊಂಡಿದ್ದವು.

No Comments

Leave A Comment