Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ವಿದ್ಯುಕ್ತವಾಗಿ ಆರಂಭಗೊಂಡ ಏಷ್ಯನ್ ಗೇಮ್ಸ್ 2018

ಜಕರ್ತಾ(ಆ.18): ಇಂಡೊನೇಷಿಯಾ ರಾಜಧಾನಿ ಜಕಾರ್ತಾದಲ್ಲಿ 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ.

ಇಂಡೊನೇಷಿಯಾ ಅಧ್ಯಕ್ಷ ಜೊಕೊ ವಿಡೊಡೊ ಜಕಾರ್ತಾದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜಕಾರ್ತಾ ಮತ್ತು ಸುಮಾತ್ರದ ಪಾಲೆಂಬಾಗ್‌ನಲ್ಲಿ ಎರಡು ವಾರಗಳ ಕಾಲ ಕ್ರೀಡಾಕೂಟ ನಡೆಯಲಿದೆ.ಕ್ರೀಡಾಕೂಟದ ಆರಂಭದಲ್ಲಿ ಕ್ರೀಡಾಪಟುಗಳು ಪಥಸಂಚಲನ ಗಮನೆಸೆಳೆಯಿತು.

ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಪಟು ನೀರಜ್ ಚೋಪ್ರ ಧ್ವಜಾಧಾರಿಯಾಗಿ ಪಥಸಂಚಲನದಲ್ಲಿ ಭಾರತ ಕ್ರೀಡಾಪಟುಗಳ ತಂಡವನ್ನ ಮುನ್ನಡೆಸಿದರು.804 ಸದಸ್ಯರ ಭಾರತೀಯ ತಂಡದಲ್ಲಿ 572 ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. 45 ದೇಶಗಳಿಂದ ಸುಮಾರು 10 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದು 58 ಪಂದ್ಯಗಳು ನಡೆಯಲಿವೆ.

ಇಂಡೊನೇಷಿಯಾ ಬ್ಯಾಡ್ಮಿಂಟನ್ ಆಟಗಾರ ಲುಸಿಯಾ ಫ್ರಾನ್ಸಿಸ್ಕಾ ಸುಸಿ ಸುಸಂತಿ ಕ್ರೀಡೆಗೆ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತೀಯ ಕ್ರೀಡಾಪಟುಗಳಿಗೆ ಶುಭಾಶಯಗಳ ಮಹಾಪೂರ ಗಣ್ಯರಿಂದ ಹರಿದು ಬಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವರು ಶುಭ ಕೋರಿದ್ದಾರೆ.

No Comments

Leave A Comment