Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಕಾರು ಅವಘಡ : ಹಿರಿಯ ನಟ ಜೈ ಜಗದೀಶ್‌ ಪಾರು

ಬೆಂಗಳೂರು: ಹಿರಿಯ ನಟ ಜೈ ಜಗದೀಶ್‌ ಅವರು ಪ್ರಯಾಣಿಸುತ್ತಿದ್ದ ಕಾರು ಅವಘಡಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ.

ಜೈ ಜಗದೀಶ್‌ ಅವರು ಬೆಂಗಳೂರಿನಿಂದ ಚನ್ನರಾಯಪಟ್ಟಣದ ಮೂಲಕ ಮಡಿಕೇರಿಯ ಸಂಬಂಧಿಕರ ಮನೆಗೆಂದು ತೆರಳುತ್ತಿದ್ದ ವೇಳೆ ಬೈಕ್‌ ಸವಾರ ಅಡ್ಡ ಬಂದಿದ್ದು, ಕಾರು ಜಮೀನಿಗೆ ಇಳಿದು ಜಖಂಗೊಂಡಿದೆ.

ಅದೃಷ್ಟವಷಾತ್‌ ಜೈಜಗದೀಶ್‌‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಿಗೊಳಗಾಗಿರುವ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

No Comments

Leave A Comment