Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಅಲೆವೂರು ಶೇಖರ ಪೂಜಾರಿ ನಿಧನ

ಉಡುಪಿ ಅಲೆವೂರಿನಲ್ಲಿಚಿರಪರಿಚಿತರಾಗಿದ್ದು, “ಶೇಖರಣ್ಣ”ಎಂದೇಜನಮಾನಸದಲ್ಲಿ ನೆಲೆಯೂರಿದ್ದ , ಇಂದಿರಾಗಾಂಧಿರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ , ರಾಜೀವಗಾಂಧಿ ಶಿರೋಮಣಿ ಪ್ರಶಸ್ತಿ ,ಏಶ್ಯಾ ಫೆಸಿಫಿಕ್ ಎಕ್ಸಲೆನ್ಸಿ ಪ್ರಶಸ್ತಿ, ಶ್ರೀ ಗಣೇಶಾನುಗ್ರಹ ಪ್ರಶಸ್ತಿ ಹಾಗೂ ಇನ್ನೂ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಅಲೆವೂರು ಶೇಖರ ಪೂಜಾರಿಯವರು (52 ವರ್ಷ) ದಿನಾಂಕ 16.08.2018ನೇ ಗುರುವಾರರಾತ್ರಿಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿಅಲ್ಪಕಾಲದಅಸೌಖ್ಯದಿಂದ ನಿಧನರಾದರು.ಅವರು ಪತ್ನಿ , ಇಬ್ಬರು ಪುತ್ರಿಯರನ್ನುಅಗಲಿದ್ದಾರೆ.

ಲೋಕೋಪಯೋಗಿಇಲಾಖೆಯ ಪ್ರಥಮದರ್ಜೆಗುತ್ತಿಗೆದಾರರಾಗಿದ್ದಅವರುಅ,ಅನೇಕ ಸಂಘ ಸಂಸ್ಥೆಗಳ ಆಶ್ರಯದಾತರಾಗಿದ್ದು, ಅಲೆವೂರುಗ್ರಾಮೀಣಕಾಂಗ್ರೆಸ್ ಮಾಜಿಅಧ್ಯಕ್ಷರು, ನಾರಾಯಣಗುರುಕಟ್ಟಡ ಸಮಿತಿಗೌರವಾಧ್ಯಕ್ಷರು, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಬ್ಯಾಂಕ್ , ಕುಕ್ಕಿಕಟ್ಟೆಮಾಜಿಉಪಾಧ್ಯಕ್ಷರಾಗಿದ್ದು, ಪ್ರಸ್ತುತನಿದೇಶಕರಾಗಿದ್ದುಅಲ್ಲದೆ ಹಲವಾರು ಸಹಕಾರಿ ಸಂಘಗಳ ನಿರ್ದೇಶಕರಾಗಿದ್ದರು.

ಸಾಮಾಜಿಕಕ್ಷೇತ್ರದಲ್ಲಿತನ್ನನ್ನುತೊಡಗಿಸಿಕೊಂಡು ಇವರು ನಡೆಸುತ್ತಿದ್ದಆಟಿಡೊಂಜಿ ದಿನಕಾರ್ಯಕ್ರಮವು ವೈವಿಧ್ಯಮಯವಾಗಿದ್ದು , ಸಾಮಾಜಿಕಕ್ರೀಡೆ ಹಾಗೂ ಯಕ್ಷಗಾನರಂಗದ ಪ್ರಸಿದ್ದರನ್ನು ಪ್ರತಿ ವರ್ಷಗೌರವಿಸುತ್ತಿದ್ದರು. ತಮ್ಮ ಮಾತೃಶ್ರೀಯವರ ನೆನಪಿನಲ್ಲಿ ಪ್ರತಿ ವರ್ಷ“ಅಮ್ಮ”ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸುತ್ತಿದ್ದರು.

ಕಳೆದ ಸಾಲಿನಲ್ಲಿಇವರು ಸಂತೆಕಟ್ಟೆ ನಿಡಂಬೂರಿನಲ್ಲಿ ನಡೆಸಿದ ನಾಗಮಂಡಲ ಸೇವೆಗೆ ರಾಜ್ಯ ಮಟ್ಟದ ನಾಯಕರು ಆಗಮಿಸಿ ಶ್ರೀ ನಾಗದೇವರ ಕೃಪೆಗೆ ಪಾತ್ರರಾಗಿದ್ದರು. ದೆಹಲಿ ಮತ್ತು ಮುಂಬೈನಲ್ಲಿ ನಡೆದ6 ಮತ್ತು 7ನೇ ಅಖಿಲ ಭಾರತಕನ್ನಡ ಸಮ್ಮೇಳನದÀ ಅಧ್ಯಕ್ಷತೆಯನ್ನು ವಹಿಸಿದ್ದು ಇವರಜೀವನ ಶ್ರೇಷ್ಠ ಸಾಧನೆ.ಅನೇಕ ಬಡವರ ಮಂಗಳ ಕಾರ್ಯಕ್ಕೆ , ಅಶಕ್ತರಿಗೆ , ಅನಾರೋಗ್ಯ ಪೀಡಿತರಿಗೆಉದಾರಧನಸಹಾಯ ಮಾಡುತ್ತಿದ್ದರು.

ಶ್ರೀಯುತರ ನಿಧನಕ್ಕೆ ಶ್ರೀ ಈಶವಿಠ್ಠಲದಾಸ ಸ್ವಾಮೀಜಿಗಳು ಸಾಂದೀಪನ ಮಠಕೇಮಾರು , ಪ್ರಸಿದ್ದ ಚಲನಚಿತ್ರ ನಟ , ಕನ್ನಡಅಭಿವೃದ್ದಿ ಪ್ರಾಧಿಕಾರದ ಮಾಜಿಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಶ್ರೀ ಮುಖ್ಯಮಂತ್ರಿಚಂದ್ರು , ಕರ್ನಾಟಕ ವಿಧಾನ ಪರಿಷತ್‍ವಿರೋಧ ಪಕ್ಷದ ನಾಯಕರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕರಾದ ಶ್ರೀ ರಘುಪತಿ ಭಟ್ ,ಕಾಪು ಶಾಸಕರಾದ ಶ್ರೀ ಲಾಲಾಜಿ ಮೆಂಡನ್ , ಉಡುಪಿ ಜಿಲ್ಲಾ ಪಂಚಾಯತ್‍ಅಧ್ಯಕ್ಷರಾದ ಶ್ರೀ ದಿನಕರ ಬಾಬು, ಕರ್ನಾಟಕ ಸರಕಾರದ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಶ್ರೀ ವಿನಯ್‍ಕುಮಾರ್ ಸೊರಕೆ , ಮಾಜಿ ಶಾಸಕರಾದ ಶ್ರೀ ಯು.ಆರ್.ಸಭಾಪತಿ ,ಅಲೆವೂರುಗ್ರಾಮಪಂಚಾಯತ್‍ಅಧ್ಯಕ್ಷರಾದ ಶ್ರೀ ಶ್ರೀಕಾಂತ್ ನಾಯಕ್ , ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಗೀತಾಂಜಲಿ ಸುವರ್ಣ, ಬಡಗುಬೆಟ್ಟುಕೋ.ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಬ್ಯಾಂಕ್ , ಕುಕ್ಕಿಕಟ್ಟೆಅಧ್ಯಕ್ಷರಾದ ಶ್ರೀ ಎ.ಶ್ರೀಧರ ಶೆಟ್ಟಿ , ಜಿಲ್ಲಾ ಬಿಜೆಪಿಯಅಧ್ಯಕ್ಷರಾದ ಶ್ರೀ ಮಟ್ಟಾರುರತ್ನಾಕರ ಹೆಗ್ಡೆ,ಕಾಂಗ್ರೆಸ್ ಮುಖಂಡರಾದ ಶ್ರೀ ಮಹಾಬಲ ಕುಂದರ್ ,ಎ.ಹರೀಶ್‍ಕಿಣಿ, ಪ್ರವೀಣ್ ಶೆಟ್ಟಿಕೊರಂಗ್ರಪಾಡಿ,ಶ್ರೀ ಅಮೃತ್ ಶೆಣ್ಯೆ ಸಾರ್ವಜನಿಕಗಣೇಶೋತ್ಸವ ಸಮಿತಿಯಗೌರವಾಧ್ಯಕ್ಷರಾದ ಶ್ರೀ ಉಮೇಶ್ ಜಿ.ಶೆಟ್ಟಿ , ಶ್ರೀ ಶೇಖರಕಲ್ಮಾಡಿ , ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿತೀವ್ರ ಸಂತಾಪ ಸೂಚಿಸಿದ್ದಾರೆ .

No Comments

Leave A Comment