Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಕೊಡಗಿನಲ್ಲಿ ಬಿರುಗಾಳಿ, ಮಳೆ, ಭೂ ಕುಸಿತಕ್ಕೆ 8 ಸಾವು? 100 ಮಂದಿ ನಾಪತ್ತೆ!

ಮಡಿಕೇರಿ: ಮಹಾಮಳೆಗೆ ಕೊಡಗು ಅಕ್ಷರಶಃ ತತ್ತರಿಸಿದ್ದು ಬಿರುಗಾಳಿ, ಮಹಾಮಳೆ, ಭೂಕುಸಿತದಲ್ಲಿ 8 ಮಂದಿ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ. ಇನ್ನು 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈವರೆಗೂ 500ಕ್ಕೂ ಹೆಚ್ಚು ಮನೆಗಳು ಕುಸಿದಿವೆ ಎಂದು ತಿಳಿದುಬಂದಿದೆ. ಇನ್ನು ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಳೆದುಕೊಂಡಿದೆ. ಹಲವು ಗ್ರಾಮಗಳು ಕಗ್ಗತಲಲ್ಲಿ ಮುಳುಗಿವೆ. ಜಿಲ್ಲೆಯಾದ್ಯಂತ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು ಸಾವಿರಾರು ಜನರು ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ.

ಕಾಟಗೇರಿ ಗ್ರಾಮದಲ್ಲಿ ಭೂ ಕುಸಿತದಿಂದ ಯಶವಂತ್, ವೆಂಕಟರಮಣ, ಪವನ್ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಕ್ಕಂದೂರಿನಲ್ಲಿ ಭೂಕುಸಿತದಿಂದ ಸಾವು ಸಂಭವಿಸಿರುವ ಸಾಧ್ಯತೆಯಿದೆ. ಮಣ್ಣಿನಡಿಯಲ್ಲಿ ಜನರ ಕೈ ಕಾಣಿಸುತ್ತಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಜಿಲ್ಲಾಡಳಿತ ಜನತೆಯ ರಕ್ಷಣೆಗೆ ಹೆಲಿಕಾಪ್ಟರ್ ತರಿಸಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಕಾವೇರಿ ಮತ್ತು ಹಾರಂಗಿ ಜಲಾಶಯವು ಸಂಪೂರ್ಣ ತುಂಬಿದೆ.

ಕುಶಾಲನಗರ, ಮಡಿಕೇರಿ, ವಿರಾಜಪೇಟೆಯ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಮಡಿಕೇರಿ, ವಿರಾಜಪೇಟೆ, ಮಡಿಕೇರಿ, ಮಂಗಳೂರು, ಹಟ್ಟಿಹೊಳೆ, ಸೋಮವಾರಪೇಟೆಗಳಲ್ಲಿ ರಸ್ತೆಗಳು ನೀರು ತುಂಬಿ ಸಂಪರ್ಕ ಕಳೆದುಕೊಂಡಿವೆ.

ಕೇರಳದಲ್ಲಿನ ಪ್ರವಾಹ ಮಳೆ, ಕರ್ನಾಟಕದ ಕರಾವಳಿ, ಕೊಡಗು, ಮಲೆನಾಡಿನಲ್ಲಿ ಸತತ ಮಳೆಯಿಂದಾಗಿ ಪ್ರವಾಸೋದ್ಯಮದ ಮೇಲೆ ತೀವ್ರ ಹೊಡೆತ ಬಿದ್ದಿದೆ. ವಾರಾಂತ್ಯ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹೊರಗೆ ಹೋಗಿ ಕುಟುಂಬದವರು, ಸ್ನೇಹಿತರ ಜೊತೆ ರಜೆಯ ಮಜಾ ಸವಿಯಬೇಕೆಂದು ಅಂದುಕೊಂಡವರಿಗೆ ವರುಣ ಮುನಿಸು ತೋರಿದ್ದಾನೆ.

ಮಳೆಗೆ ಹೊರಗೆ ಹೋಗಲಾರದೆ, ದೀರ್ಘ ಪ್ರಯಾಣ ಹೋಗಲು ಸಾಧ್ಯವಾಗದೆ ಮನೆಯಲ್ಲಿ ಉಳಿದುಕೊಳ್ಳುವವರ ಸಂಖ್ಯೆಯೇ ಹೆಚ್ಚಾಗಿದೆ. ಇನ್ನು ಕೆಲವರು ಪ್ರಯಾಣ ಮಧ್ಯದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

No Comments

Leave A Comment