Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಅಫ್ಘಾನ್‌ ಸೇನಾ ನೆಲೆಗೆ ಉಗ್ರರ ದಾಳಿ;10ಕ್ಕೂ ಹೆಚ್ಚು ಸೈನಿಕರ ಹತ್ಯೆ

ಕಾಬೂಲ್‌: ಉತ್ತರ ಅಫ್ಘಾನಿಸ್ಥಾನದ ಸೇನಾ ನೆಲೆಯೊಂದರ ಮೇಲೆ ತಾಲಿಬಾನ್‌ ಉಗ್ರರು ದಾಳಿ ನಡೆಸಿದ್ದು 10 ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆಗೈದಿದ್ದಾರೆ.

2 ದಿನಗಳ ಹಿಂದೆ ಉಗ್ರರು ಚನಹಿಯಾ ಸೇನಾ ನೆಲೆಗೆ ನುಗ್ಗಿದ್ದು ಇನ್ನೂ ಉಗ್ರರು ಹಿಡಿತ ಸಾಧಿಸಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಕೆಲ ಅಧಿಕಾರಿಗಳು ಉಗ್ರರು 40 ಮಂದಿ ಸೈನಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿದ್ದು, ಈಗಾಗಲೇ 30 ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ.

ಆ ಪ್ರಾಂತ್ಯದಲ್ಲಿ ತಾಲಿಬಾನ್‌ ವಾರದಿಂದ ಭಾರಿ ಅಟ್ಟಹಾಸ ಮೆರೆಯುತ್ತಿದ್ದು  ನೂರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

No Comments

Leave A Comment