Log In
BREAKING NEWS >
ಪುತ್ತಿಗೆಮಠದ ನೂತನ ಉತ್ತರಾಧಿಕಾರಿ ಸುಶ್ರೀ೦ದ್ರ ತೀರ್ಥಶ್ರೀಪಾದರಿ೦ದ ಶ್ರೀಕೃಷ್ಣಮಠ, ಶ್ರೀಅನ೦ತೇಶ್ವರ, ಚ೦ದ್ರಮೌಳೇಶ್ವರ ಮತ್ತು ಪುತ್ತಿಗೆ ಮಠಕ್ಕೆ ಸೋಮವಾರ ಸಾಯ೦ಕಾಲ ಭೇಟಿ...

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದಲ್ಲಿನ ಮಹಿಳೆಯರಿ೦ದ ಆದಿತ್ಯವಾರ ಚೂಡಿಪೂಜೆ ಪ್ರಾರ೦ಭ

ಚೂಡಿಪೂಜೆಹಿಂದಿದೆಪ್ರಕೃತಿಯಪೂಜೆಯವಿಶಿಷ್ಟಪರಂಪರೆ

ಏನಿದುಚೂಡಿಪೂಜೆ?:  ಸಿಂಹಮಾಸದ ಶ್ರಾವಣದಲ್ಲಿ ಸೂರ್ಯ ಪರಮಾತ್ಮನು ತನ್ನ ಸ್ವಕ್ಷೇತ್ರ ಸಿಂಹರಾಶಿಯಲ್ಲಿ ಆಗಮಿಸಿದ ಸಂದರ್ಭ ಸೂರ್ಯದೇವನ ಬಿಂಬವನ್ನು ರಂಗೋಲಿಯಲ್ಲಿ ಬರೆದು ಅದರ ಹತ್ತಿರ ಪ್ರಕೃತಿಯಲ್ಲಿಸಿಗುವಗರಿಕೆ, ಬಣ್ಣಬಣ್ಣದ ಲಕ್ಷ್ಮಿಸಾನಿಧ್ಯವುಳ್ಳ ಹೂವುಗಳನ್ನು ಅರ್ಪಿಸಿ ಸೂರ್ಯನಿಗೆ ವಂದನೆ ಸಲ್ಲಿಸಲಾಗುತ್ತದೆ.

ತುಳಸಿಸನ್ನಿಧಿಯಲ್ಲಿಶ್ರಾವಣಮಾಸದಪ್ರತಿಶುಕ್ರವಾರಮತ್ತುಭಾನುವಾರನಡೆಯುವಚೂಡಿಪೂಜೆಯುಗೌಡಸಾರಸ್ವತಕುಟುಂಬದಹಾಗೂಪರಿಸರದಮುತ್ತೈದೆಯರನ್ನುಒಟ್ಟುಸೇರುವಂತೆಮಾಡುತ್ತದೆ.

(ಜಿ ಎಸ್ ಬಿ ಸಮಾಜದ ಪ್ರಸಿದ್ಧ ಕಲ್ಸಂಕ ಪೈ ಮನೆತನದ ಅನಂತನಾರಾಯಣ ಪೈ ಯವರ ಮನೆಯಲ್ಲಿ ಆಗಸ್ಟ 12 ರ ಆದಿತ್ಯವಾರ ನಡೆದ ಶ್ರಾವಣ ಮಾಸದ ಚೂಡಿ ಪೂಜೆಯ ಚಿತ್ರಗಳು.)

‘ಚೂಡಿ’ ಶಬ್ದವುಕನ್ನಡದಸೂಡಿಅರ್ಥಾತ್‌ಗಂಟು, ಗುಂಪುಎನ್ನುವಅರ್ಥಹೊಂದಿದೆ. ಗರಿಕೆಹುಲ್ಲಿನೊಂದಿಗೆರಥಪುಷ್ಪ, ಕರವೀರ, ರತ್ನಗಂಧಿ, ಮಿಠಾಯಿಹೂವು ಹಾಗೂ ವೈವಿಧ್ಯಮಯಸಸ್ಯಗಳಾದ ಅನ್ವಾಳೆ, ಲಾಯೆಮಾಡ್ಡೊ, ನೆಲನೆಲ್ಲಿ, ಕಾಟ್‌ಚಿರ್ಡೋ, ಕಾಯ್‌ಳ್ಯಾದೋಳೋಮಜ್ರಾನಾಂಕುಟ, ಗಾಂಟಿ ಮಾಡ್ಡೊ ಇತ್ಯಾದಿ ನಿಸರ್ಗಸಹಜವಾಗಿಬೆಳೆಯುವಕಾಟುಹೂಗಳನ್ನೆಲ್ಲಾಜೋಡಿಸಿಬಾಳೆಹಗ್ಗದಿಂದಒಟ್ಟಿಗೆಕಟ್ಟಿದರೆಅದೇಚೂಡಿ.

ಇವೆಲ್ಲಾಹೂವಿನಅಂಗಡಿಯಲ್ಲಿಲಭ್ಯವಿದ್ದರೂಮಹಿಳೆಯರುಅದನ್ನುಸುತ್ತಮುತ್ತಲಿನಪರಿಸರದಿಂದಸಂಗ್ರಹಿಸಿಯೇಕಟ್ಟಲುಇಷ್ಟಪಡುತ್ತಾರೆ. ಪ್ರಾತಃಕಾಲದಲ್ಲಿಚೂಡಿಪೂಜೆಮಾಡಲುಪ್ರಶಸ್ತಸಮಯ. ಬೇಗನೆಆಗದಿದ್ದಲ್ಲಿಮಧ್ಯಾಹ್ನ 12 ಗಂಟೆಯೊಳಗಾದರೂಪೂಜೆಮುಗಿಸಬೇಕು.

ಬೆಳಗ್ಗೆಮಂಗಲಸ್ನಾನಪೂರ್ವಕಸಾಂಪ್ರದಾಯಿಕಶೈಲಿಯ 18 ಮೊಳದಸೀರೆಯನ್ನುಕಚ್ಚೆಹಾಕಿಉಡುವಮುತ್ತೈದೆಯರುಬಾವಿದಂಡೆಗೆಹಳದಿಕುಂಕುಮಹಚ್ಚಿ, ಹೂವುಇಟ್ಟುನೀರಿಗೆಹರಿದ್ರಾಕುಂಕುಮಅರ್ಪಿಸಿಗಂಗಾಸ್ಮರಣಪೂರ್ವಕನೀರುತೆಗೆದುಮನೆಅಂಗಳದಲ್ಲಿತುಳಸಿಕಟ್ಟೆಎದುರುರಂಗೋಲಿಹಾಕಿ, ಮನೆದ್ವಾರದಹೊಸ್ತಿಲಿಗೆಶೇಡಿಬರೆದು, ಅಲಂಕರಿಸಿಚೂಡಿಪೂಜೆಆರಂಭಿಸುತ್ತಾರೆ.

ದೀಪಹಚ್ಚಿಜಾಗಂಟೆಬಾರಿಸಿತುಳಸಿಗೆನೀರೆರೆದುಅರಸಿನಕುಂಕುಮ, ಗಂಧಹಚ್ಚಿ , ವೀಳ್ಯಚೂಡಿಅರ್ಪಿಸಿ, ಹಣ್ಣುಕಾಯಿ, ಪಂಚ ಕಜ್ಜಾಯ ನೈವೇದ್ಯ ಮಾಡಿ ಆರತಿ ಬೆಳಗಲಾಗುತ್ತದೆ. ಬಳಿಕತುಳಸಿಗೆ 5 ಪ್ರದಕ್ಷಿಣೆಹಾಕಿಪ್ರತಿಸುತ್ತಿನಲ್ಲಿಯೂತುಳಸಿಗೂಸೂರ್ಯದೇವನಿಗೂಅಕ್ಷತೆಹಾಕುತ್ತಾರೆ.

ತೆಂಗಿನಮರಕ್ಕೆಒಂದುಚೂಡಿಯನ್ನುಅರ್ಪಿಸಿಮಡಿದಹಿರಿಯರಿಗಾಗಿಮನೆಯಛಾವಣಿಮೇಲೆಒಂದುಚೂಡಿಇಡಲಾಗುತ್ತದೆ. ಅತ್ತೆಮುತ್ತೈದೆಯಾಗಿ ಮಡಿದರೆ ಎರಡು ಚೂಡಿಇಡಲಾಗುತ್ತದೆ. ಗೌಡಸಾರಸ್ವತಬ್ರಾಹ್ಮಣಸಮುದಾಯದವರುತಮ್ಮೂರದೇವಳಗಳಲ್ಲಿಸಾಮೂಹಿಕಚೂಡಿಒಟ್ಟಾಗಿಆಚರಿಸುವರೂಢಿಯಿದೆ.

ದೇವರಕೋಣೆಯಲ್ಲಿಜ್ಯೋತಿಬೆಳಗಿ, ಪತಿದೇವರಿಗೆಆರೋಗ್ಯ, ಆಯುಷ್ಯ, ಗೃಹಿಣಿಯರಿಗೆಮುತ್ತೈದೆಸೌಭಾಗ್ಯನೀಡಿ, ಕುಟುಂಬದಪ್ರೀತಿವಿಶ್ವಾಸ, ಸಂಬಂಧ, ಸಂತೋಷನಿರಂತರವಾಗಿ, ಉತ್ತಮ ರೀತಿಯಲ್ಲಿ ಇರಲು ಸೂರ್ಯ ದೇವನಲ್ಲಿ ಹಾಗೂ ತುಳಸಿ ಸನ್ನಿಧಿಯಲ್ಲಿ ಕುಲ ದೇವರನ್ನು ಸ್ಮರಿಸುತ್ತಾ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಮನೆಯಪ್ರಧಾನಹೊಸ್ತಿಲಿಗೆಪೂಜೆಮಾಡಿ, ದೇವರಕೋಣೆಗೆಬಂದುಕುಲದೇವರು, ಇಷ್ಟದೇವರು, ಗ್ರಾಮದೇವರನ್ನು ಸ್ಮರಿಸಿ ಶ್ರೀದೇವರ ಸನ್ನಿಧಿಯಲ್ಲಿ ಚೂಡಿ ಅರ್ಪಿಸಲಾಗುತ್ತದೆ. ಪೂಜಿಸಿದಚೂಡಿಯನ್ನುಮುಡಿವಮುತ್ತೈದೆಯರುತಮ್ಮಪತಿಗೆವೀಳ್ಯನೀಡಿಆಶೀರ್ವಾದಪಡೆಯುತ್ತಾರೆ. ಹಿರಿಯರು, ಸಂಬಂಧಿಕರ ಮನೆಗೆ ತೆರಳಿ ಚೂಡಿನೀಡುತ್ತಾರೆ. ಚೂಡಿನೀಡುವುದರಿಂದ ಕುಟುಂಬ, ನೆರೆಹೊರೆಯವರ ಜತೆಪ್ರೀತಿ, ವಿಶ್ವಾಸವೃದ್ಧಿಯಾಗಿ ಸಂಬಂಧಶಾಶ್ವತವಾಗಲುಸಹಕಾರಿಯಾಗುತ್ತದೆ.

ದೂರದಊರಿಗೆಅಂಚೆಮೂಲಕಚೂಡಿಕಳುಹಿಸಿ, ತಮ್ಮಸಂಬಂಧ, ಪ್ರೀತಿವಿಶ್ವಾಸನಿರಂತರಇರಲುಪತ್ರಬರೆದುಆಶೀರ್ವಾದವನ್ನೂಪಡೆಯುವುದಿತ್ತು.

ಗೌಡಸಾರಸ್ವತಬ್ರಾಹ್ಮಣರುಪವಿತ್ರವೃಕ್ಷ, ಜಲ, ಸೂರ್ಯ, ಪ್ರತಿಮೆಯಲ್ಲಿ ದೇವರನ್ನು ಆರಾಧಿಸಿದರೆ ಸ್ತ್ರೀಯರು ಶ್ರಾವಣಮಾಸದಲ್ಲಿ ತುಳಸಿ ಸನ್ನಿಧಿಯಲ್ಲಿ ದೇವರನ್ನು ಆರಾಧಿಸುತ್ತಾರೆ. ಮಕ್ಕಳನ್ನೂ ಚೂಡಿ ಪೂಜೆಯಲ್ಲಿತೊಡಗಿಸಿದರೆ, ಮಾಹಿತಿ, ಮಾರ್ಗದರ್ಶನ ನೀಡಿದರೆ ಮುಂದಿನ ಪೀಳಿಗೆಗೂ ಚೂಡಿ ಪೂಜೆಯ ಸಂಪ್ರದಾಯ ಉಳಿಯಲಿದೆ, ಮಹತ್ವಅರಿತುಕೊಳ್ಳುವಂತಾಗಲಿದೆ.

*ಮುಕ್ಕೋಟಿದೇವರಿದ್ದಾರೆ: ತುಳಸಿಯಲ್ಲಿಶ್ರಾವಣಮಾಸದವೇಳೆಮುಕ್ಕೋಟಿದೇವರುನೆಲೆಸುತ್ತಾರೆಎಂಬನಂಬಿಕೆಇರುವುದರಿಂದತುಳಸಿಗೆಪೂಜೆಸಲ್ಲಿಸಲಾಗುತ್ತದೆ.

*ಪಂಚಮುತ್ತೈದೆಯರು: ಮದುವೆಯಾಗಿಮೊದಲವರ್ಷವಾಗಿದ್ದರೆ, ಹುಡುಗಿ ಕಡೆಯ ಐದುಮುತ್ತೈದೆಯರು, ಗಂಡನ ಮನೆಯ ಐದು ಮುತ್ತೈದೆಯರು ಸೇರಿ ಚೂಡಿ ಪೂಜೆಮಾಡುತ್ತಾರೆ.

ಪ್ರಕೃತಿಯೇಮೂಲ: ಉತ್ತರಭಾರತದಸರಸ್ವತಿನದಿತೀರದಲ್ಲಿಒಂದುವಂಶಇತ್ತು. ಈಗ ಗೌಡ ಸಾರಸ್ವತರು ಎಂದು ಕರೆಯುವ ಈ ವಂಶ ಶೃಂಗಾರ ಪ್ರಿಯರಾಗಿದ್ದರು.

ಶ್ರಾವಣಮಾಸದಲ್ಲಿ ಪ್ರಕೃತಿಯ ಮಡಿಲಲ್ಲೇ ದೊರಕುವ ಹೂವುಗಳನ್ನುತಂದುಚೂಡಿಕಟ್ಟಿ (ಸೂಡಿಕಟ್ಟಿ)

ಗಂಟುಕಟ್ಟಿಶೃಂಗಾರಮಯಪ್ರಕೃತಿಯನ್ನುಪೂಜಿಸುತ್ತಿದ್ದರು.*ಗೌಡಸಾರಸ್ವತರಲ್ಲದೆವಿಶ್ವಕರ್ಮರು, ದೈವಜ್ಞರಲ್ಲಿಯೂಚೂಡಿಪೂಜಾಪದ್ಧತಿಇದೆ. ಕಳೆದ 20 ವರ್ಷಗಳಿಂದೀಚೆಗೆಇದುಮನೆಯಂಗಳದಪೂಜೆಯಾಗಿಮಾತ್ರಉಳಿದಿಲ್ಲ. ದೇವಸ್ಥಾನದಲ್ಲಿ ಸಾಮೂಹಿಕವಾಗಿ ಚೂಡಿಪೂಜೆನಡೆಸುವ ಸಂಪ್ರದಾಯವೂ ನಡೆದುಬಂದಿದೆ.

No Comments

Leave A Comment