Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಉಡುಪಿ:ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳೆರಡು ಮುಳುಗಡೆ: 16 ಮೀನುಗಾರರ ರಕ್ಷಣೆ

ಉಡುಪಿ/ ಭಟ್ಕಳ: ಪ್ರತ್ಯೇಕ  ಘಟನೆಗಳಲ್ಲಿ ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಎರಡು ಬೋಟ್‌ಗಳು ಮುಳುಗಡೆಯಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಬೋಟ್‌ಗಳಲ್ಲಿದ್ದ ಎಲ್ಲಾ 16 ಮೀನುಗಾರರನ್ನು ರಕ್ಷಿಸಲಾಗಿದೆ.

ಶನಿವಾರ ಸಂಜೆ ಎಂಟು ಜನ ಮೀನುಗಾರರು ಮಲ್ಪೆಯಿಂದ ಶಿವ ಗಣೇಶ್ ಎಂಬ ಬೋಟ್‌ನಲ್ಲಿ ಮೀನುಗಾರಿಕೆಗೆ ಹೊರಟಿದ್ದರು. ಈ ವೇಳೆ ಭಾರಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮುಳುಗಡೆಯಾಗಿದೆ. ಈ ವೇಳೆ ಇನ್ನೊಂದು ಬೋಟಿನ ಮೀನುಗಾರರು ಎಲ್ಲಾ ಎಂಟು ಜನರನ್ನು ರಕ್ಷಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ ಭಟ್ಕಳದಲ್ಲಿ ಆಳ ಸಮುದ್ರದ ಮೀನುಗಾರಿಕೆ ನಡೆಸುತ್ತಿದ್ದ  ಪದ್ಮದಾಸ  ಬೊಟ್‌ನ ಕಬ್ಬಿಣದ ವೆಲ್ಡ್ ತುಂಡಾದ ಕಾರಣ ನೀರು ಒಳಗೆ ನುಗ್ಗಿ ಬೋಟ್ ಮುಳುಗಡೆಯಾಗಿದೆ. ಇದರಲ್ಲಿದ್ದ ಎಂಟು ಜನರನ್ನು ಬೇರೆ ಬೋಟ್ ನ ಮೀನುಗಾರರು ರಕ್ಷಿಸಿದ್ದಾರೆ.

No Comments

Leave A Comment