Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಪ್ರಿಯಾಂಕಾಗೆ ನನ್ನೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ತೊಂದರೆ ಇಲ್ಲ: ಸಲ್ಮಾನ್

ಮುಂಬೈ: ಪ್ರಮುಖ ಹಾಲಿವುಡ್ ಚಿತ್ರವೊಂದರಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಪಡೆದ ಬಾಲಿವುಡ್ ನಟಿ ಪ್ರಿಯಾಂಕಾ ಚ್ರೋಪ್ರಾರನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಂದಿಸಿದ್ದಾರೆ. ಆದರೆ ತಮ್ಮ ಮುಂದಿನ ಚಿತ್ರ ‘ಭರತ್’ ಚಿತ್ರೀಕರಣ ಆರಂಭವಾಗುವ ಕೇವಲ 10 ದಿನಗಳ ಮುನ್ನ ಪ್ರಿಯಾಂಕಾ ಚಿತ್ರದಿಂದ ಹೊರ ನಡೆದಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
‘ಭರತ್’ದಿಂದ ಹೊರಹೋಗಿರುವುದಕ್ಕೆ ಪ್ರಿಯಾಂಕಾ ವಿಭಿನ್ನ ಕಾರಣಗಳನ್ನು ನೀಡಿದ್ದಾರೆ. ಆದರೆ ಅವರು ನಮ್ಮ ಚಿತ್ರ ಕೈಬಿಡಲು ನಿಶ್ಚಿತಾರ್ಥ(ನಿಕ್ ಜತೆ ಪ್ರಿಯಾಂಕಾ ನಿಶ್ಚಿತಾರ್ಥ) ಕಾರಣವಿರಬಹುದು ಅಥವಾ ಹಾಲಿವುಡ್ ಚಿತ್ರ ಕಾರಣವಿರಬಹುದು. ಒಂದು ವೇಳೆ ನನ್ನೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೂ ಏನೂ ತೊಂದರೆ ಇಲ್ಲ. ಅವರು ಹಾಲಿವುಡ್ ದೊಡ್ಡ ಹೀರೋನೊಂದಿಗೆ ಕೆಲಸ ಮಾಡಿದರೂ ಸಂತೋಷ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಭರತ್ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಅಭಿನಯಿಸಬೇಕಿತ್ತು. ಆದರೆ ಆರಂಭದಲ್ಲಿ ಸಂಭಾವನೆ ವಿಚಾರವಾಗಿ ಚಿತ್ರದಂಡದ ನಡುವೆ ಒಮ್ಮತ ಮೂಡದಿದ್ದರಿಂದ ಪ್ರಿಯಾಂಕಾ ಚಿತ್ರದಿಂದ ಹೊರಬಂದಿದ್ದಾರೆ ಎನ್ನಲಾಗಿತ್ತು. ಬಳಿಕ ಪ್ರಿಯಾಂಕಾ ತನ್ನ ಗೆಳೆಯ ನಿಖ್ ಜೋನ್ಸ್ ಜತೆ ಮದುವೆ ಆಗುತ್ತಿದ್ದಾರೆ ಹೀಗಾಗಿ ಚಿತ್ರದಿಂದ ಬರಬಂದಿದ್ದಾಗಿ ವರದಿಯಾಗಿತ್ತು.
No Comments

Leave A Comment