Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಶೀರೂರು ಮೂಲಮಠದ ಚರಾಸ್ತಿ ಸೋದೆ ಮಠಕ್ಕೆ ಹಸ್ತಾಂತರ

ಉಡುಪಿ: ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥರ ಸಂಶಯಾಸ್ಪದ ಸಾವಿನ ಬಳಿಕ ಪೊಲೀಸ್‌ ಸುಪರ್ದಿಯಲ್ಲಿದ್ದ ಹಿರಿಯಡ್ಕದ ಶೀರೂರು ಮೂಲದ ಮಠದಲ್ಲಿದ್ದ ಮೌಲ್ಯಯುತ ಚರಾಸ್ತಿಯನ್ನು ಭದ್ರತೆ ಹಿನ್ನೆಲೆಯಲ್ಲಿ ಉಡುಪಿಯ ಶೀರೂರು ಮಠದ ಲಾಕರ್‌ನಲ್ಲಿ ಇಡಲಾಯಿತು.

ಶೀರೂರು ಮೂಲ ಮಠ ಪೊಲೀಸರ ಸುಪರ್ದಿಯಲ್ಲಿದ್ದ ಹಿನ್ನೆಲೆಯಲ್ಲಿ ಚಿನ್ನಾಭರಣವನ್ನು ಪೊಲೀಸರ ಎದುರು ಮಹಜರು ನಡೆಸಿದ ಬಳಿಕ ರಾತ್ರಿ ದ್ವಂದ್ವ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಲಾಯಿತು.

ಶೀರೂರು ಮೂಲ ಮಠದ ಮುಖ್ಯ ಪ್ರಾಣ ದೇವರ ಬೆಲೆಬಾಳುವ ಬೆಳ್ಳಿ ಕವಚ, ಚಿನ್ನಾಭರಣ, ಪೂಜಾ ಸಾಮಗ್ರಿ ಸಹಿತ ಶ್ರೀಗಳ ಬಳಿಯಲ್ಲಿದ್ದ ಚರಾಸ್ತಿಯನ್ನು ಉಡುಪಿ ಶೀರೂರು ಮಠಕ್ಕೆ ತರಲಾಗಿದೆ. ದೇವರ ದೊಡ್ಡ ಬೆಳ್ಳಿ ಪಲ್ಲಕ್ಕಿಯನ್ನು ಶೀರೂರು ಮೂಲ ಮಠದಲ್ಲೇ ಭದ್ರವಾಗಿ ಇರಿಸಲಾಗಿದೆ.

ಪೊಲೀಸರ ಮಹಜರಿನ ಬಳಿಕ ಶೀರೂರು ಮೂಲ ಮಠದಿಂದ ಭದ್ರವಾಗಿ ಚಿನ್ನಾಭರಣವನ್ನು ಉಡುಪಿಯ ಶೀರೂರು ಮಠದ ಹಿಂಬಾಗಿಲ ಮೂಲಕ ಒಳಗೆ ತರಲಾಯಿತು. ವಿಚಾರಣೆ ಮುಂದುವರಿದ ಹಿನ್ನೆಲೆಯಲ್ಲಿ ಭದ್ರತೆಗೆ ನಿಯೋಜಿತ ಪೊಲೀಸರಿಂದ ಚರಾಸ್ತಿಯನ್ನು ದ್ವಂದ್ವ ಮಠದ ಪ್ರತಿನಿಧಿಗಳು ಪಡೆದುಕೊಂಡರು.

No Comments

Leave A Comment