Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶನಿವಾರ ಮತ್ತು ಭಾನುವಾರದ೦ದು ಸಮಾಜ ಬಾ೦ಧವರ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಯಲಿದೆ....

ಕೀಕಿ ಡ್ಯಾನ್ಸ್‌; ಬಿಗ್‌ ಬಾಸ್‌ ಗೊಂಬೆ ನಿವೇದಿತಾಗೆ ಸಂಕಷ್ಟ!

ಬೆಂಗಳೂರು: ಬಿಗ್‌ ಬಾಸ್‌ ಖ್ಯಾತಿಯ ನಿವೇದಿತಾ ಗೌಡ ಅಪಾಯಕಾರಿ ಕೀಕಿ ಡ್ಯಾನ್ಸ್‌  ಮಾಡಿದ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಆಕೆಯ ವಿರುದ್ಧ ದೂರು ದಾಖಲಾಗಿದೆ.

ಸಂಚಾರಕ್ಕೆ ಸಮಸ್ಯೆ  ಮಾಡಿದ ಆರೋಪದಲ್ಲಿ ಕನ್ನಡ ಚಳುವಳಿಯ ನಾಗೇಶ್‌ ಅವರು ಹಲಸೂರು ಗೇಟ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಿಂದಾಗಿ ನಿವೇದಿತಾ ಗೌಡಗೆ ಸಂಕಷ್ಟ ಎದುರಾಗಿದೆ.

ಚಲಿಸುವ ಕಾರಿನಿಂದ ಹೊರಗೆ ಹಾರುವ, ಮತ್ತೆ ಕಾರಿನೊಳಗೆ ಜಿಗಿದು ಬರುವ, ನಡು ರಸ್ತೆಯಲ್ಲಿ ಡ್ಯಾನ್ಸ್‌ ಮಾಡುವ  ಹುಚ್ಚು ಸಾಹಸದ ಕೆನಡ ರ್‌ಯಾಪರ್‌ ಡ್ರೇಕ್‌ ನ ಹೊಸ ಮ್ಯೂಸಿಕ್‌ ಟ್ರ್ಯಾಕ್‌ “ಕೀಕಿ  ಡೂ ಯೂ ಲವ್‌ ಮೀ’ ಮಾರಣಾಂತಿಕ ನೃತ್ಯ ಅಪಾಯಕಾರಿಯಾಗಿ ಪರಿಣಮಿಸಿರುವ ಹಿನ್ನಲೆಯಲ್ಲಿ   ದೇಶಾದ್ಯಂತ ಪೊಲೀಸರು ಇದನ್ನು ನಿಗ್ರಹಿಸಲು ಪಣ ತೊಟ್ಟಿದ್ದಾರೆ. ಕೀಕಿ ನೃತ್ಯದಲ್ಲಿ ತೊಡಗಿರುವುದು ಕಂಡುಬಂದರೆ ದಂಡ ವಿಧಿಸಿ, ವಾಹನ ಜಪ್ತಿ ಮಾಡಲಾಗುವದು ಎಂಬ ಎಚ್ಚರಿಕೆ ನೀಡಿದ್ದಾರೆ

ಈಗಾಗಲೇ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹಿತೇಂದ್ರ, ಕೀಕಿ ಅಪಾಯಕಾರಿ ನೃತ್ಯವನ್ನು ಯಾರಾದರೂ ಮಾಡಿದಲ್ಲಿ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

No Comments

Leave A Comment