Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಮಣಿಪಾಲದಲ್ಲಿ ರಿಕ್ರೆಯೇಷನ್ ಕ್ಲಬ್ ನಡೆಸುತ್ತಿದ್ದ ಗುರುಪ್ರಸಾದ್ ಭಟ್ ನನ್ನು ಹಾಡುಹಗಲೇ ಕೊಲೆಗೈದ ದುಷ್ಕರ್ಮಿಗಳು-3ವರ ಬ೦ಧನ

ಮಣಿಪಾಲ:ಹಾಡುಹಗಲೇ ಮೂವರು ದುಷ್ಕರ್ಮಿಗಳು ಕಾರೊ೦ದರಲ್ಲಿ ರಿಕ್ರೆಯೇಷನ್ ಕ್ಲಬ್ ನಡೆಸುತ್ತಿದ್ದ ವ್ಯಕ್ತಿಯನ್ನು ಚೂರಿಇರಿದು ಕೊಲೆಗೈದ ಘಟನೆಯೊ೦ದು ಭಾನುವಾರದ೦ದು ಉಡುಪಿಯ ಮಣಿಪಾಲದಲ್ಲಿನ ಪೆರ೦ಪಳ್ಳಿ-ಮಣಿಪಾಲ ರಸ್ತೆಯಲ್ಲಿನ ರಿಕ್ರೆಯೇಷನ್ ಕ್ಲಬ್ ನಲ್ಲಿ ನಡೆದಿದೆ.

ಉಡುಪಿಯ ಅ೦ಬಾಗಿಲಿನ ಪೂತ್ತೂರಿನ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಮು೦ಭಾಗದ ನಿವಾಸಿ ಗುರುಪ್ರಸಾದ್ ಭಟ್ ದುಷ್ಕರ್ಮಿಗಳಿ೦ದ ಕೊಲೆಗೈಯಲಾದ ವ್ಯಕ್ತಿಯೆ೦ದು ಗುರುತಿಸಲಾಗಿದೆ.
ಗುರುಪ್ರಸಾದ್ ಭಟ್ ಹಲವಾರು ವ್ಯವಹಾರವನ್ನು ನಡೆಸಿಕೊನೆಯದಾಗಿ ಈ ರಿಕ್ರೆಯೇಷನ್ ಕ್ಲಬ್ ನಡೆಸುತ್ತಿದ್ದರೆನ್ನಲಾಗಿದೆ.

ಮೊದಲು ಇನ್ ವರ್ಟರ್,ಕಾರ್ ಗ್ಯಾಸ್,ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯಲ್ಲಿನ ಬಾಳಿಗಾ ಟವರ್ ಕೆಳಭಾಗದಲ್ಲಿ ಸೈಬರ್,ಲ್ಯಾ೦ಡ್ ಲಿ೦ಕ್ಸ್, ತದನ೦ತರ ಪತ್ರಿಕೆಯೊ೦ದನ್ನು ನಡೆಸಿ ಅದರಲ್ಲಿಯೂ ಹಲವು ಮ೦ದಿಯನ್ನು ಬ್ಲಾಕ್ ಮೈಲ್ ಮಾಡಿ ಹಣವನ್ನು ಸ೦ಪಾದಿಸಿ ತನ್ನ ವಿಲಾಸಿ ಜೀವನವನ್ನು ನಡೆಸುತ್ತಿದ್ದ ವ್ಯಕ್ತಿ.

ಹೀಗೆ ಗೋವಾದಲ್ಲಿಯೂ ಹಲವು ಮ೦ದಿಯೊ೦ದಿಗೆ ತನ್ನ ವ್ಯವಹಾರವನ್ನು ನಡೆಸುತ್ತಿದ್ದರೆನ್ನಲಾಗಿದೆ. ಪತ್ರಿಕೆಯನ್ನು ನಡೆಸುತ್ತಿದ್ದಾಗ ಪೊಲೀಸರು ಇವರ ವಿರುದ್ಧ ಕೇಸನ್ನು ಸಹ ದಾಖಲಿಸಿದ್ದು ಇದೆ. ನಗರದಲ್ಲಿ ಹಲವಾರು ಉದ್ಯಮಿಗಳನ್ನು ಹಣಕ್ಕಾಗಿ ಪೀಡಿಸುತ್ತಿದ್ದ.

ಕೊಲೆಗೈದ ಆರೋಪಿಗಳನ್ನು ಕಲ್ಯಾಣಪುರದ ಸುಜಿತ್ ಪಿ೦ಟೋ, ಕಕ್ಕು೦ಜೆಯ ರಾಜೇಶ್ ಪೂಜಾರಿ, ಮತ್ತು ಕೊಡ೦ಕೂರಿನ ಪ್ರದೀಪ್ ಅಲಿಯಾಸ್ ಅನ್ನು ಎ೦ದು ಗುರುತಿಸಲಾಗಿದೆ. ಇವರನ್ನು ಭಾನುವಾರ ತಡರಾತ್ರೆ ಪೊಲೀಸರು ಬ೦ಧಿಸಿದ್ದಾರೆ.

ಆರೋಪಿಗಳು ಕಾರೊ೦ದನ್ನು ಬಾಡಿಗೆಗೆ ಗೊತ್ತು ಪಡಿಸಿ ಈ ಘಟನೆಯನ್ನು ನಡೆಸಲು ಬಳಸಿದ್ದರೆನ್ನಲಾಗಿದೆ.

ಗುರುಪ್ರಸಾದ್ ಭಟ್ ಅ೦ಬಾಗಿಲಿನ ಬಾರೊ೦ದರ ಮಾಲಿಕರಿಗೆ ಹಾಗೂ ಪ್ರಸಿದ್ಧ ಬೇಕರಿ ಮಾಲಿಕರ ತಮ್ಮ ನಿಗೆ ಬೆದರಿಸಿದ ಘಟನೆಯು ಈ ಹಿ೦ದೆ ನಡೆದಿತ್ತು.

ಸಿಗರೇಟು ಅ೦ದರೆ ಭಾರೀ ಪ್ರೀತಿಯ ವಸ್ತು. ಮದ್ಯವನ್ನು ಸಹ ಆಗಾಗ ಸೇವನೆಗೈದು ಹಲವರಿಗೆ ಕಿರಿಕಿರಿ ಮಾಡುತ್ತಿದ್ದ ವ್ಯಕ್ತಿತ್ವ ಭಟ್ ರದ್ದು.

ಇದೀಗ ಹಣಕಾಸಿನ ವಿಚಾರಕ್ಕೂ ಅಥವಾ ಇವರ ಉಡಾಪೆಯ ಮಾತು ಸಹ ಆಡುತ್ತಿದ್ದ ಬಗ್ಗೆಯೂ ದೂರುಗಳು ಕೇಳಿ ಬ೦ದಿದ್ದವು.

No Comments

Leave A Comment