Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ವಿದ್ಯಾರ್ಥಿಗಳಿಗಾಗಿ ‘ಕಲಿಕಾ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಮತ್ತು ಸುರಕ್ಷತೆ ಹಾಗೂ ರಸ್ತೆ ಸಂಚಾರ ಜಾಗೃತಿ ಶಿಬಿರ

ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠ ಮತ್ತು ರೋಟರಿ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಪೆರ್ಡೂರು ರೋಟರಿ ಕ್ಲಬ್ ಮತ್ತು ವಲಯ 4ರ ಎಲ್ಲ ಕ್ಲಬ್ ಗಳ ಸಹಕಾರದೊಂದಿಗೆ ಸಂಯೋಜಿಸಿರುವ ಪ್ರಸ್ತುತ ಹತ್ತನೇ ತರಗತಿಯಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಕಲಿಕಾ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ ಮತ್ತು ಸುರಕ್ಷತೆ ಹಾಗೂ ರಸ್ತೆ ಸಂಚಾರ ಜಾಗೃತಿ ಶಿಬಿರ’ವನ್ನು ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕರಾದ ಭಾಸ್ಕರ ಹಂದೆ,ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶಪ್ಪ,ವಲಯ 4ರ ಅಸಿಸ್ಟಂಟ್ ಗವರ್ನರ್ ರೋ.ಡಾ.ಗಣೇಶ್ ಎ,ಪೆರ್ಡೂರು ರೋಟರಿ ಅಧ್ಯಕ್ಷರಾದ ರೋ.ರಾಮದಾಸ ನಾಯಕ್ ಉಪಸ್ಥಿತರಿದ್ದು,ಸಮಾರಂಭದ ಅಧ್ಯಕ್ಷರಾಗಿ ಉಡುಪಿ ರೋಟರಿ ಅಧ್ಯಕ್ಷರಾದ ಎ.ಎಸ್.ಚಂದ್ರಶೇಖರ್ ಭಾಗವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಎ.ವಿ.ಬಾಳಿಗಾ ಆಸ್ಪತ್ರೆಯ ಮನಶಾಸ್ತ್ರಜ್ಞರಾದ ನಾಗರಾಜ ಮೂರ್ತಿ,ಕೆ.ಎಂ.ಸಿ.ಮಣಿಪಾಲದ ಮನೋವಿಜ್ಞಾನ ವಿಭಾಗದ ಸಪ್ನಾ ಗಣೇಶ್,ಮಂಗಳೂರಿನ ಬೆಸೆಂಟ್ ಇನ್ಸ್ಟಿಟ್ಯೂಟ್ ನ ಡಾ.ನಾರಾಯಣ ಕಾಯರಕಟ್ಟೆ,ಉಡುಪಿ ರೋಟರಿಯ ರೋ.ಡಾ.ಸುರೇಶ ಶೆಣೈ ಭಾಗವಹಿಸಿದ್ದರು.

No Comments

Leave A Comment