Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಶೀರೂರು ಮಠ : ಮದ್ಯದ ಬಾಟಲಿಗಳು ಪತ್ತೆ

ವೇಣೂರು: ಉಡುಪಿಯ ಶೀರೂರು ಶ್ರೀ ಅಸ್ವಾಭಾವಿಕ ಸಾವಿನ ಪ್ರಕರಣದಲ್ಲಿ ವಿಚಾರಣೆಗೊಳಗಾಗಿದ್ದ ರಮ್ಯಾ ಶೆಟ್ಟಿಯನ್ನು ಬೆಳ್ತಂಗಡಿ ತಾಲೂಕಿನ ಅಳದಂಗಡಿಯಲ್ಲಿ ವೇಣೂರು ಪೊಲೀಸರು ಸೋಮವಾರ ವಶಕ್ಕೆ ಪಡೆದು ಉಡುಪಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 

ಮೂವರು ಮಹಿಳೆಯರಿದ್ದ ಮಾರುತಿ ಎರ್ಟಿಗಾ ಕಾರು ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನ ಬಳಿಯ ಗ್ಯಾರೇಜೊಂದರ ಮುಂಭಾಗ ಪಂಕ್ಚರ್‌ ಆಗಿತ್ತು. ಈ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯ ಚಲನವಲನದ ಬಗ್ಗೆ ಸ್ಥಳೀಯರಿಗೆ ಅನುಮಾನ ಉಂಟಾಗಿ ಪೊಲೀಸರಿಗೆ ಮಾಹಿತಿ ನೀಡಿದರು. ವೇಣೂರು ಪೊಲೀಸರು ರಮ್ಯಾ ಶೆಟ್ಟಿ ಸೇರಿದಂತೆ ಐವರನ್ನು ಉಡುಪಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಮಧ್ಯೆ ರಮ್ಯಾ ಶೆಟ್ಟಿ ಸುಳ್ಯ ಮೂಲದವರಾಗಿದ್ದು, ಉಡುಪಿಗೆ ಮದುವೆಯಾಗಿ ಬಂದಿದ್ದಾರೆನ್ನಲಾಗಿದೆ.

ಬೆಂಗಳೂರಿನಲ್ಲಿ ಗುಪ್ತ ಸಿದ್ಧತೆ?
ಉಡುಪಿ: ಶೀರೂರು ಸ್ವಾಮೀಜಿ ಸಾವಿನ ಪ್ರಕರಣ ಶ್ರೀಕೃಷ್ಣ ಮಠದ ಸರಕಾರೀಕರಣಕ್ಕೆ ಹೇತುವಾಗುವ ಸಾಧ್ಯತೆ ಇದೆ ಎನ್ನುತ್ತಿವೆ ಸದ್ಯದ ವರದಿಗಳು. ಶೀರೂರು ಸ್ವಾಮೀಜಿ ಇಹಲೋಕ ತ್ಯಜಿಸಿದ ಬಳಿಕ ಮಾಧ್ಯಮಗಳಲ್ಲಿ ತರಹೇವಾರಿ ವರದಿಗಳು ಬರುತ್ತಿವೆ. ಪೊಲೀಸ್‌ ಇಲಾಖೆ ದೈನಂದಿನ ವರದಿಗಳನ್ನು ಸರಕಾರಕ್ಕೆ ಕಳುಹಿಸುತ್ತಿದೆ. ಸ್ತ್ರೀ ಸಂಪರ್ಕ, ಮದ್ಯಪಾನ ಇತ್ಯಾದಿ ಅಂಶಗಳೂ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಎಲ್ಲ ಮಠಗಳನ್ನೂ ಜನರು ಶಂಕೆಯಿಂದ ಕಾಣುವ ಸಾಧ್ಯತೆ ಇದೆ. ಈ  ಸಂದರ್ಭ ಬಳಸಿಕೊಂಡು ಕೆಲವರು ಮಠವನ್ನು ಸರಕಾರದ ವಶಕ್ಕೆ ಪಡೆಯಲು ಒತ್ತಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರೊಂದಿಗೆ  ಹಿಂದೂಪರ ಧೋರಣೆಯ ಪೇಜಾವರ ಶ್ರೀಗಳ ತೇಜೋವಧೆ ಮಾಡುವ ಗುರಿ ಕೆಲವರಿಗಿದೆ. ಈ ಮೂಲಕ ಇಡೀ ಬಲಪಂಥೀಯ ಸಂಘಟನೆಗಳಿಗೆ ಪೆಟ್ಟು ಹೊಡೆಯಬಹುದು ಎಂಬ ಲೆಕ್ಕಾಚಾರವೂ ಇದರಲ್ಲಿದೆ  ಎನ್ನಲಾಗುತ್ತಿದೆ. ಈ ಹಿಂದೆಯೂ  ಕೆಲವರು ಆಗ್ರಹಿಸಿದ್ದು, ಮತ್ತೆ ಮಾಹಿತಿ, ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಕೇಮಾರು ಶ್ರೀಗಳಿಗೆ ಬೆದರಿಕೆ
ಶೀರೂರು ಶ್ರೀಗಳ ಅಸಹಜ ಸಾವಿಗೆ ಸಂಬಂಧಿಸಿ ಶ್ರೀಗಳ ಆಪ್ತರಾದ ಕೇಮಾರು ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿ ಬೆದರಿಕೆಯನ್ನು ಹಾಕಲಾಗಿದೆ.

ಹಿರಿಯಡಕ: ಮತ್ತೂಂದು ಹೈ ಪ್ರೊಫೈಲ್‌ ಕೇಸ್‌
ಹಿರಿಯಡಕ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಜಾನುವಾರು ವ್ಯಾಪಾರಿ ಹಸನಬ್ಬ ಸಾವಿನ ಪ್ರಕರಣದ ಬಳಿಕ ಶೀರೂರು ಶ್ರೀಗಳದ್ದು ಎರಡನೇ ಹೈ ಪ್ರೊಫೈಲ್‌ ಪ್ರಕರಣ. ಹಸನಬ್ಬರ ಸಾವನ್ನೂ ಮೊದಲು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿ ಅನಂತರ ಕೊಲೆ (302) ಪ್ರಕರಣವೆಂದು ಬದಲಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಕೂಡ ಎರಡು ಬಾರಿ ನಡೆದಿತ್ತು. ಆ ಪ್ರಕರಣವನ್ನೀಗ CID ನಿರ್ವಹಿಸುತ್ತಿದೆ. ಈಗ ಶೀರೂರು ಶ್ರೀಗಳ ಪ್ರಕರಣವೂ ‘ಅಸ್ವಾಭಾವಿಕ ಮರಣ’ವಾಗಿದ್ದರೂ ಕೊಲೆ ಎಂದು ಬದಲಾಯಿಸಲು ಮರಣೋತ್ತರ ಪರೀಕ್ಷೆಯ ಅಗತ್ಯವಿಲ್ಲ. ಆದರೆ ಕೆಲವು ಸಾಂದರ್ಭಿಕ ಸಾಕ್ಷ್ಯಗಳು ಬೇಕು’ ಎಂಬ ಅಭಿಪ್ರಾಯ ಕೆಲವು ಕಾನೂನು ತಜ್ಞರದ್ದು.

ವರದಿಗೆ ಕಾಯಬೇಕಿಲ್ಲ : ಕಾನೂನು ತಜ್ಞರು
‘ಮರಣೋತ್ತರ ಪರೀಕ್ಷಾ ವರದಿ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿಲ್ಲ. ಈಗ ದಾಖಲಾಗಿರುವ ಅಸ್ವಾಭಾವಿಕ ಸಾವಿನ ಪ್ರಕರಣ ಕಲಂ 174 (ಸಿ)ದಲ್ಲಿಯೇ ಬಂಧನಕ್ಕೆ ಅವಕಾಶವಿದೆ. ಆದರೆ ಪೊಲೀಸರು ಬಂಧಿಸಿದರೆ 24 ಗಂಟೆಗಳೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಇಂಥ ಗಂಭೀರ ಪ್ರಕರಣಗಳಲ್ಲಿ ಶಂಕೆಯ ಆಧಾರದಲ್ಲೂ ಬಂಧಿಸಬಹುದು. ಆದರೆ ಇದಕ್ಕೆ ಪೂರಕವಾಗಿ ಏನಾದರೂ ಸಾಕ್ಷ್ಯಾಧಾರಗಳು ಇರಬೇಕು. ಈ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿರಬಹುದು. ಬಂಧಿಸಿರಲೂಬಹುದು’ ಎನ್ನುತ್ತಾರೆ ಕಾನೂನು ತಜ್ಞರೊಬ್ಬರು.

No Comments

Leave A Comment