Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಹಿಮಾಚಲ ಪ್ರದೇಶ: ವಸತಿ ಕಟ್ಟಡದಲ್ಲಿ ಭೀಕರ ಅಗ್ನಿ ಅನಹುತ, 5 ಬಲಿ

ಮಂಡಿ, ಹಿಮಾಚಲ ಪ್ರದೇಶ : ಇಲ್ಲಿನ ವಸತಿ ಕಟ್ಟಡದಲ್ಲಿ ಇಂದು ಸೋಮವಾರ ಬೆಳಗ್ಗೆ ಭೀಕರ ಅಗ್ನಿ ಅನಾಹುತ ಸಂಭವಿಸಿ ಐವರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಕಟ್ಟಡದೊಳಗೆ ಇನ್ನೂ ಅನೇಕರು ಸಿಕ್ಕಿ ಹಾಕಿಕೊಂಡಿರುವುದಾಗಿ ಶಂಕಿಸಲಾಗಿದ್ದು ಅವರನ್ನು ಪಾರು ಗೊಳಿಸುವ ಕಾರ್ಯಾಚರಣೆ ಇದೀಗ ಜಾರಿಯಲ್ಲಿದೆ ಎಂದು ವರದಿಗಳು ತಿಳಿಸಿವೆ.

ಮಂಡಿ ನಗರದ ನೇರ್‌ ಚೌಕ್‌ ಪ್ರದೇಶದಲ್ಲಿನ ವಸತಿ ಕಟ್ಟಡದಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತು. ನೋಡ ನೋಡುತ್ತಿದ್ದಂತೆಯೇ ಅದು ಭೀಕರ ಸ್ವರೂಪವನ್ನು ತಳೆಯಿತು. ಪರಿಣಾಮವಾಗಿ ಐವರನ್ನು ಅದು ಬಲಿ ಪಡೆಯಿತು. ಸುದ್ದಿ ತಿಳಿದಾಕ್ಷಣವೇ ಅಗ್ನಿ ಶಾಮಕಗಳನ್ನು ಸ್ಥಳಕ್ಕೆ ರವಾನಿಸಲಾಯಿತು ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ರಾಜೀವ್‌ ಕುಮಾರ್‌ ತಿಳಿಸಿದರು.

ಕಟ್ಟಡದೊಳಗೆ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡಿರುವುದನ್ನು ಶಂಕಿಸಲಾಗಿದೆ. ಇದರಿಂದಾಗಿಯೇ ಈ ಭೀಕರ್‌ ಅಗ್ನಿ ಅನಾಹುತ ಸಂಭವಿಸಿರಬೇಕೆಂದು ಹೇಳಲಾಗಿದೆ.

No Comments

Leave A Comment