Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಅಮೆರಿಕ: ಕಾಲ್‌ ಸೆಂಟರ್‌ ಹಗರಣ; 20ಕ್ಕೂ ಅಧಿಕ ಭಾರತೀಯರಿಗೆ ಜೈಲು

ನ್ಯೂಯಾರ್ಕ್‌: ಸಹಸ್ರಾರು ಅಮೆರಿಕನ್‌ ಪ್ರಜೆಗಳಿಗೆ ಲಕ್ಷಾಂತರ ಡಾಲರ್‌ ವಂಚಿಸಿರುವ ಭಾರತದಲ್ಲಿನ ಕಾಲ್‌ ಸೆಂಟರ್‌ಗಳ ಬಹುಕೋಟಿ ಡಾಲರ್‌ ಹಗರದಲ್ಲಿ ಶಾಮೀಲಾಗಿರುವ 20ಕ್ಕೂ ಹೆಚ್ಚು ಮಂದಿ ಭಾತೀಯ ಅಪರಾಧಿಗಳಿಗೆ ಅಮೆರಿಕದಲ್ಲಿ ನಾಲ್ಕರಿಂದ 20 ವರ್ಷಗಳ ಜೈಲು ಶಿಕ್ಷೆಯಾಗಿದೆ. ಜೈಲು ಶಿಕ್ಷೆಯನ್ನು ಮುಗಿಸಿದ ಬಳಿಕ ಇವರನ್ನು ಭಾರತಕ್ಕೆ ಗಡೀಪಾರು ಮಾಡಲಾಗುತ್ತದೆ.

“ಇಂಡಿಯಾ ಕಾಲ್‌ ಸೆಂಟರ್‌ ಸ್ಕ್ಯಾಮ್‌ ಇಂಡಸ್ಟ್ರಿಯನ್ನು ಗುರಿ ಇರಿಸಿ ಬಹು ವ್ಯಾಪ್ತಿ ಪ್ರದೇಶದ ಪ್ರಾಸಿಕ್ಯೂಶನ್‌ ಗೆ ಒಳಪಟ್ಟ ಪ್ರಪ್ರಥಮ ಹಾಗೂ ಭಾರೀ ದೊಡ್ಡ ಗಾತ್ರದ ಹಣ ವಂಚನೆಯ ಪ್ರಕರಣದಲ್ಲಿ 20ಕ್ಕೂ ಅಧಿಕ ಭಾರತೀಯ ಅಪರಾಧಿಗಳಿಗೆ ಕಠಿನ ಶಿಕ್ಷೆ ನೀಡಲಾಗಿದೆ’ ಎಂದು ಅಮೆರಿಕದ ಅಟಾರ್ನಿ ಜರಲ್‌ ಜೆಫ್ ಸೆಶನ್ಸ್‌ ಹೇಳಿದರು.

ಅಮೆರಿಕದ ಬೃಹತ್‌ ಸಂಖ್ಯೆಯ ಜನರನ್ನು ಬಲಿಪಶು ಮಾಡಲಾಗಿರುವ ಈ ವಂಚನೆ ಹಗರಣವನ್ನು ಬಯಲಿಗೆಳೆದು ಅಪರಾಧಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗಿರುವ ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್‌ ಯಶಸ್ಸು ಅತ್ಯಂತ ಮಹತ್ವದ್ದಾಗಿದೆ ಮತ್ತು ಈ ಮೂಲಕ ಅಮೆರಿಕದ ಜನರಿಗೆ ನ್ಯಾಯ ದೊರಕಿದಂತಾಗಿದೆ  ಎಂದು ಜೆಫ್ ಹೇಳಿದರು.

ಭಾರತೀಯ ಕಾಲ್‌ ಸೆಂಟರ್‌ಗಳು ಅನೇಕ ಬಗೆಯ ಟೆಲಿಫೋನ್‌ ಫ್ರಾಡ್‌ ಸ್ಕೀಮುಗಳನ್ನು ಬಳಸಿಕೊಂಡು ಹಿರಿಯ ಅಮೆರಿಕನ್‌ ಪ್ರಜೆಗಳು ಮತ್ತು ಸಕ್ರಮ ವಲಸಿಗರು ಸೇರಿದಂತೆ ಸಹಸ್ರಾರು ಮಂದಿ ಅಮಾಯಕರಿಗೆ ಲಕ್ಷಾಂತರ್‌ ಡಾಲರ್‌ ವಂಚಿಸಿವೆ ಎಂದು ಜೆಫ್ ಹೇಳಿದರು.

No Comments

Leave A Comment