Log In
BREAKING NEWS >
``````````ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ ``````

ಆಷಾಢ ಮಾಸವಾದ ಕಾರಣ ಶಿಷ್ಯ ಸ್ವೀಕಾರ ನಡೆಸುವಂತಿಲ್ಲ-ಸೋದೆ

ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡರು. ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ವೇ|ಮೂ| ಹೆರ್ಗ ವೇದವ್ಯಾಸ ಭಟ್‌ ಅವರ ನೇತೃತ್ವದಲ್ಲಿ ಜರಗಿದವು.

ಉತ್ತರಾಧಿಕಾರಿ ಆಯ್ಕೆ ಸೋದೆ ಶ್ರೀ ಹೆಗಲಿಗೆ
ಸೋದೆ ಮತ್ತು ಶೀರೂರು ದ್ವಂದ್ವ ಮಠಗಳ ಪರಂಪರೆ ವಿಶಿಷ್ಟವಾದುದು. ಸೋದೆ ಮಠದ ಪರಂಪರೆಯಲ್ಲಿ ಪ್ರತಿಯೊಬ್ಬ ಶಿಷ್ಯರನ್ನು ಅವರ ಮಠದ ಹಿರಿಯ ಸ್ವಾಮೀಜಿಯವರೇ ನೀಡಿದ್ದರು. ಶೀರೂರು ಮಠದ ಪ್ರತಿಯೊಬ್ಬ ಸ್ವಾಮೀಜಿಯವರನ್ನು ದ್ವಂದ್ವ ಮಠವಾದ ಸೋದೆ ಮಠಾಧೀಶರೇ ನೇಮಿಸಿದ್ದರು. ಈಗಲೂ ಶೀರೂರು ಮಠಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವ ಹೊಣೆ ಸೋದೆ ಮಠಾಧೀಶರ ಹೆಗಲೇರಿದೆ.

ಶೀರೂರು ಮಠಕ್ಕೆ ಯಾವಾಗ ಉತ್ತರಾಧಿಕಾರಿಯನ್ನು ನೇಮಿಸುತ್ತೀರಿ ಎಂದು ಪತ್ರಕರ್ತರು ಸೋದೆ ಮಠಾಧೀಶರನ್ನು ಕೇಳಿದಾಗ, ‘ಜಾತಕ ಪರಿಶೀಲನೆ ಮಾಡಿ ನೇಮಿಸಬೇಕಾಗುತ್ತದೆ’ ಎಂದರು. ಈಗ ಆಷಾಢ ಮಾಸವಾದ ಕಾರಣ ಶಿಷ್ಯ ಸ್ವೀಕಾರ ನಡೆಸುವಂತಿಲ್ಲ, ಚಾತುರ್ಮಾಸ್ಯ ವ್ರತ ಸದ್ಯವೇ ಆರಂಭವಾಗುವ ಕಾರಣ ಬಳಿಕವೂ ನೇಮಿಸಬಹುದಾಗಿದೆ ಎಂದು ತಿಳಿದುಬಂದಿದೆ. ಸದ್ಯ ಶೀರೂರು ಮಠದ ಪಟ್ಟದ ದೇವರು ಶ್ರೀಕೃಷ್ಣ ಮಠದಲ್ಲಿ ಪೂಜೆಗೊಳ್ಳುತ್ತಿರುವುದರಿಂದ ಪೂಜೆಯ ಸಮಸ್ಯೆ ಇಲ್ಲ.

No Comments

Leave A Comment