Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಟೆಲಿ ಮಾರ್ಕೆಟಿಂಗ್‌ ಕರೆ, ಸಂದೇಶಗಳಿಗೆ ಕಡಿವಾಣ

ಹೊಸದಿಲ್ಲಿ: ವಿವಿಧ ಟೆಲಿ ಮಾರ್ಕೆಟಿಂಗ್‌ ಕಂಪೆನಿಗಳಿಂದ ನಿಮ್ಮ ಮೊಬೈಲಿಗೆ ಬರುವ ಅನಾವಶ್ಯಕ ಕರೆಗಳು ಹಾಗೂ ಕಿರು ಸಂದೇಶಗಳ ಕಿರಿಕಿರಿಯಿಂದ ಹೈರಾಣಾಗಿರುವ ಮೊಬೈಲ್‌ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. ಇಂತಹ ಕರೆಗಳಿಗೆ ಹಾಗೂ ಸಂದೇಶಗಳಿಗೆ ಆರಂಭಿಕ ಹಂತದಲ್ಲೇ ಸಂಪೂರ್ಣವಾಗಿ ಲಗಾಮು ಹಾಕಲು ನಿರ್ಧರಿಸಿರುವ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹೊಸ ನಿಯಮ ಜಾರಿಗೊಳಿಸಿದೆ.

ಅದರ ಪ್ರಕಾರ ನಿರ್ದಿಷ್ಟ ಮೊಬೈಲ್‌ ಸೇವಾ ಸಂಸ್ಥೆ ಯಲ್ಲಿ ಟೆಲಿ ಮಾರ್ಕೆಟಿಂಗ್‌ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ವಾಗಲಿದೆ. ಮೊಬೈಲ್‌ ಗ್ರಾಹಕರಿಗೆ ಅವರ ಒಪ್ಪಿಗೆ ಇಲ್ಲದೆ ಟೆಲಿ ಮಾರ್ಕೆಟಿಂಗ್‌ನ ಯಾವುದೇ ಕರೆ ಅಥವಾ ಸಂದೇಶ ಕಳುಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಅಂದರೆ, ಮೊಬೈಲ್‌ ಸೇವಾ ಸಂಸ್ಥೆಯಲ್ಲಿ ನೋಂದಣಿ ಮಾಡಿಕೊಂಡ ಮಾತ್ರಕ್ಕೆ ಆ ಸಂಸ್ಥೆಯ ಎಲ್ಲ ಗ್ರಾಹಕರಿಗೆ ಕರೆ ಮಾಡುವುದು, ಸಂದೇಶ ಕಳುಹಿಸುವುದು ಇನ್ನು ಶಿಕ್ಷಾರ್ಹ ಅಪರಾಧ.

ಈ ಹಿಂದೆಯೂ ಟೆಲಿ ಮಾರ್ಕೆಟಿಂಗ್‌ ಕಂಪೆನಿಗಳ ಕಿರಿಕಿರಿ ನಿಯಂತ್ರಣಕ್ಕೆ ಟ್ರಾಯ್‌ ನಿಯಮಾವಳಿಗಳನ್ನು ರೂಪಿಸಿತ್ತು. ಆದರೆ ಅವು ಸಮರ್ಪಕವಾಗಿ ಅನುಷ್ಠಾನ ಗೊಳ್ಳದ ಕಾರಣದಿಂದಾಗಿ ಹೊಸ ನಿಬಂಧನೆಗಳನ್ನು ಕಡ್ಡಾಯಗೊಳಿಸಿದೆ. ಈ ನಿಯಮಗಳನ್ನು ಉಲ್ಲಂ ಸುವ ಟೆಲಿಕಾಂ ಸಂಸ್ಥೆಗಳಿಗೆ ಅಥವಾ ಮೊಬೈಲ್‌ ಸೇವಾ ಸಂಸ್ಥೆಗಳಿಗೆ ಆಯಾ ಅಪರಾಧದ ತೀವ್ರತೆಯ ಆಧಾರದ ಮೇರೆಗೆ ಕನಿಷ್ಠ 1,000 ರೂ.ನಿಂದ ಗರಿಷ್ಠ 50 ಲಕ್ಷ ರೂ.ಗಳವರೆಗೆ ದಂಡ ವಿಧಿಸುವುದಾಗಿ ಟ್ರಾಯ್‌ ಎಚ್ಚರಿಸಿದೆ.

ಈವರೆಗೆ ಮೊಬೈಲ್‌ಗೆ ಅತಿಯಾಗಿ ಟೆಲಿ ಮಾರ್ಕೆಟಿಂಗ್‌ ಕರೆ ಸಂದೇಶಗಳು ಬಂದಾಗ ಆತ ಮೊಬೈಲ್‌ ಸೇವೆ ನೀಡುತ್ತಿರುವ ಕಂಪೆನಿಯ ಗ್ರಾಹಕ ಸೇವಾ ವಿಭಾಗಕ್ಕೆ ಕರೆ ಮಾಡಿ ಅಥವಾ ನಿಗದಿತ ಸಂಖ್ಯೆಗೆ ಸಂದೇಶ ಕಳುಹಿಸಿ ಅಂಥ ಕರೆಗಳನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಬೇಕಿತ್ತು.

ಅನಾವಶ್ಯಕ ಕರೆ, ಸಂದೇಶಗಳಿಗೆ ಆರಂಭಿಕ ಹಂತದಲ್ಲೇ ಲಗಾಮು ಹಾಕಲು ನಿರ್ಧಾರ
ಮೊಬೈಲ್‌ ಸೇವಾ ಸಂಸ್ಥೆಗಳಲ್ಲಿ, ಟೆಲಿ ಮಾರ್ಕೆಟಿಂಗ್‌ ಸಂಸ್ಥೆಗಳ ನೋಂದ‌ಣಿ ಕಡ್ಡಾಯ
ಗ್ರಾಹಕರ ಒಪ್ಪಿಗೆಯಿಲ್ಲದೆ ಕರೆ, ಸಂದೇಶ ಕಳುಹಿಸುವುದು ಇನ್ನು ದಂಡಾರ್ಹ ಅಪರಾಧ
ನಿಯಮ ಉಲ್ಲಂಘನೆಗೆ 1,000 ರೂ.ನಿಂದ ಗರಿಷ್ಠ 50 ಲಕ್ಷ ರೂ.ವರೆಗೆ ದಂಡ

No Comments

Leave A Comment