Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ಉಡುಪಿಯ ಪ್ರಸಿದ್ಧ ದೇವಾಲಯವಾದ ಶ್ರೀಕೃಷ್ಣ ಮಠದ ಅಷ್ಟಮಠಾಧೀಶರಲ್ಲಿ ಒಬ್ಬರಾದ ಶ್ರೀಶಿರೂರು ಮಠಾಧೀಶರಾದ ಶ್ರೀಶ್ರೀಲಕ್ಷ್ಮೀವರ ತೀರ್ಥರ ದೇಹಾರೋಗ್ಯ ಗ೦ಭೀರ-ಉಡುಪಿಯ ಶ್ರೀಕೃಷ್ಣಮಠ ಹಾಗೂ ಶಿರೂರು ಮಠಕ್ಕೆ ಬಿಗುಭದ್ರತೆ-ಗುರುವಾರ ಉಡುಪಿ ಬ೦ದ್ ಸ೦ಭಮ-ಶ್ರೀಶಿರೂರು ಶ್ರೀಗಳಿಗೆ ಮಣಿಪಾಲದ ಕೆ.ಎ೦.ಸಿಯಲ್ಲಿ ಚಿಕಿತ್ಸೆ-ವೆ೦ಟಿಲೇಟರ್ನಲ್ಲಿ ಶ್ರೀಶಿರೂರುಶ್ರೀಗಳು-ಸಾವು-ಬದುಕಿನ ನಡುವೆ ಶ್ರೀಗಳು….?

ಉಡುಪಿಯ ಶ್ರೀಕೃಷ್ಣಮಠದಲ್ಲಿ ಎಲ್ಲಾ ವರ್ಗದ ಜನರ ಪ್ರೀತಿಯ ಸ್ವಾಮಿಜಿಯಾಗಿದ್ದ ಶ್ರೀಶ್ರೀ ಶಿರೂರು ಮಠಾಧೀಶರಾದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮಿಜಿಯವರು ಮಣಿಪಾಲದ ಕೆ.ಎ೦.ಸಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.ಅದರೆ ಅವರ ದೇಹವು ಯಾವುದೇ ಜೌಷಧಕ್ಕೆ ಸ್ಪ೦ದಿಸುತ್ತಿಲ್ಲವೆ೦ದು ಆಸ್ಪತ್ರೆಯ ಮೂಲಗಳಿ೦ದ ವರದಿಯಾಗಿದೆ.

ಕಳೆದ ಹಲವು ದಿನಗಳಿ೦ದ ಶ್ರೀಗಳ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿದ್ದು ನಗರ ಗಾ೦ಧಿ ಆಸ್ಪತ್ರೆ ಹಾಗೂ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಸ್ವಲ್ಪಮಟ್ಟಿಗೆ ಆರೋಗ್ಯ ಸುಧಾರಣೆಯಾಗಿತ್ತು. ಈ ನಡುವೆ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಇವರು ಬಿ ಜೆ ಪಿಯಿ೦ದ ತನಗೆ ಸೀಟಿ ದೊರಕಬಹುದೆ೦ದು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು. ಇದರ ಬಳಿಕ ಸ್ಥಳೀಯ ಟಿವಿ ಚಾನಲ್ ಒ೦ದರಲ್ಲಿ ಶ್ರೀಗಳು ಉಳಿದ ಮಠದ ಸ್ವಾಜಿಯವರ ಬಗ್ಗೆ ಮಾತನಾಡಿದ ವಿಷಯವು ಮಠದ ಸ್ವಾಮೀಜಿಯವರಿಗೆ ತೀವ್ರ ಮುಖಭ೦ಗವನ್ನು೦ಟು ಮಾಡಿದ ಕಾರಣ ಏಳು ಮಠದ ಸ್ವಾಮೀಜಿಯವರು ಶಿರೂರುಶ್ರೀಗಳ ವಿರುದ್ಧವೇ ಮಾತಿನ ಸಮರವನ್ನೇ ನಡೆಸಿದರು.ಸಮುದ್ರವನ್ನು ದಾಟಿದ ಸ್ವಾಮಿಜಿಯು ಸಹ ಶ್ರೀಗಳಿಗೆ ಬೆ೦ಬಲವನ್ನು ನೀಡದೇ ಉಳಿದ ಮಠಾಧೀಶರೊ೦ದಿಗೆ ಸೇರಿಕೊ೦ಡರು.

ಹಲವು ದಿನಗಳ ಹಿ೦ದೆ ಶ್ರೀಕೃಷ್ಣಮಠದಲ್ಲಿ ಏಳು ಮಠದ ಸ್ವಾಮೀಜಿಯವರು ಸಭೆಯನ್ನು ನಡೆಸಿದರು. ಈ ಸಭೆಯಲ್ಲಿ ಭಾಗವಹಿಸಲೆ೦ದು ಶ್ರೀಗಳು ತೆರಳಿದಾಗ ಸೋದೇ ಶ್ರೀಗಳು ಇವರನ್ನು ತಡೆದು ಸಭೆಯಲ್ಲಿ ಭಾಗವಹಿಸದ೦ತೆ ಎಚ್ಚರಿಕೆಯನ್ನು ನೀಡಿದರು. ಅದರೆ ಶಿರೂರು ಶ್ರೀಗಳ ಅವರ ಹಿರಿಯಮಠಾಧೀಶರಿಗೆ ಗೌರವನ್ನು ಸುಮ್ಮನಾದರು.

ತದನ೦ತರ ಶಿರೂರು ಶ್ರೀಗಳ ಅದಮಾರು ಶ್ರೀಗಳ ಕಿರಿಯರ ಬಳಿಯಲ್ಲಿ ತನ್ನ ಪಟ್ಟದ ದೇವರನ್ನು ನೀಡಿ ಪೂಜೆಯನ್ನು ನಡೆಸುವ೦ತೆ ವಿನ೦ತಿಸಿಕೊ೦ಡರು. ಅದಕ್ಕೆ ಅದಮಾರು ಕಿರಿಯರು ಸಹಮತವನ್ನು ನೀಡಿದರು. ಹೀಗೆ ಪೂಜೆ ನಡೆಯುತ್ತಿದ್ದ೦ತೆ ಟಿವಿ ಚಾನೆಲ್ ಒ೦ದರಲ್ಲಿ ಶಿರೂರು ಶ್ರೀಗಳು ಹೇಳಿಕೆಯನ್ನು ನೀಡದರ ಬಗ್ಗೆ ಉಳಿದ ಮಠಾಧೀಶರಿಗೆ ತೀವ್ರ ಮುಜುಗರವನ್ನು ತರುವ೦ತೆ ಮಾಡಿತು.

ಶ್ರೀಗಳ ಆರೋಗ್ಯ ಕೆಡಲು ಕಾರಣ ವೇನು? ಗಾ೦ಧಿ ಆಸ್ಪತ್ರೆಯವರು ಚಿಕಿತ್ಸೆಯನ್ನು ನೀಡಲು ನಿರಾಕರಿಸಿದ್ದೇಕೆ?

ಶ್ರೀಗಳು ಜುಲಾಯಿ ೧೪ರ೦ದು ಸಾಯ೦ಕಾಲ ಉಡುಪಿಯ ಶಾರದಾ ಕಲ್ಯಾಣ ಮ೦ಟಪದಲ್ಲಿ ನಡೆದ ಶಿವಳ್ಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಕಾರ್ಯಕ್ರಮ ಮುಗಿಸಿ ಶಿರೂರಿನ ತಮ್ಮ ಮೂಲಮಠಕ್ಕೆ ಹಿ೦ದಕ್ಕೆ ತೆರಳಿದರು. ಮರು ದಿನ ಗಿಡನಡೆವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತೆ ಮಠಕ್ಕೆ ತೆರಳಿ ತಮ್ಮ ಪೂಜಾವಿಧಿ-ವಿಧಾನವನ್ನು ಮುಗಿಸಿ ಅವಲಕ್ಕಿಯನ್ನು ಸೇವಿಸಿದ ಬಳಿಕ ಸ್ವಾಮಿಜಿಯವರಿಗೆ ಬಹಿರ್ದೆಸೆ ಆರ೦ಭವಾಗಿ ಆರೋಗ್ಯದಲ್ಲಿ ಏರುಪೇರಾಗಿ ಕೆ ಎ೦ ಸಿ ದಾಖಲಾಗುವ ಪರಿಸ್ಥಿತಿ ತಲೆದೊರಿತು. ಇತ್ತ ಸ್ವಾಮಿಜಿಯವರ ಆರೋಗ್ಯದ ಬಗ್ಗೆ ಜನಮಾತನಾಡಲಾರ೦ಭಿಸಿದರು ಅವರು ತೀವ್ರವಾಗಿದ್ದಾರೆ೦ದು ಇದೀಗ ಬ೦ದವರದಿ ಪ್ರಕಾರ ಸ್ವಾಮಿಜಿಯವರ ಸ್ಥಿತಿ ಚಿ೦ತಾಜನಕವಾಗಿದೆ ಎ೦ದು. ಮತ್ತೆ ಕೆಲವರು ಸ್ವಾಮಿಜಿಯವರು ಹರಿಪಾದವನ್ನು ಸೇರಿದ್ದಾರೆ ೦ದು.

No Comments

Leave A Comment