Log In
BREAKING NEWS >
ಇ೦ದು ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವರ 123ನೇ ಪ್ರತಿಷ್ಠಾ ವರ್ಧ೦ತೋತ್ಸವ-ಪ೦ಚಾಮೃತ ಅಭಿಷೇಕ-ಶತಕಲಾಭಿಷೇಕ-ಮಹಾಪೂಜೆ-ಮಹಾ ಸಮಾರಾಧನೆಯೊ೦ದಿಗೆ ರಾತ್ರಿ ಪೇಟೆ ಉತ್ಸವ ಕಾರ್ಯಕ್ರಮ... ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವಸ೦ತಮಾಸದ ಪ್ರಯುಕ್ತ ಮೇ 23ರ೦ದು ಸಗ್ರಿ ನಾಯಕ್ ಕುಟು೦ಬಸ್ಥರಿ೦ದ ವಸ೦ತಪೂಜಾ ಸೇವೆಯು ಜರಗಲಿದೆ

ಉಡುಪಿ: ಯಕ್ಷಗಾನ ಜಾನಪದವಲ್ಲ, ಶಾಸ್ತ್ರೀಯ ಕಲೆ. ಅದರ ವಿಶಿಷ್ಟ ನಿಯಮಗಳನ್ನು ಗುರು ಸಂಜೀವ ಸುವರ್ಣ ಉಳಿಸುತ್ತಿದ್ದಾರೆ ಎಂದು ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಹೇಳಿದರು. ಯಕ್ಷಗಾನ ಕಲಾರಂಗ ಹಾಗೂ ಗುರು ಬನ್ನಂಜೆ ಸಂಜೀವ ಸುವರ್ಣ ಅಭಿನಂದನ ಸಮಿತಿ ವತಿಯಿಂದ ರವಿವಾರ ಪುರಭವನದಲ್ಲಿ ಜರಗಿದ ಗುರು ಬನ್ನಂಜೆ ಸಂಜೀವ ಸುವರ್ಣ ಅಭಿನಂದನೆ ಮತ್ತು ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮಾರಕ “ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನವನ್ನು ಕೆಡಿಸುವ, ಅದರ ಮಾನ ತೆಗೆಯುವಂತಹ ಪ್ರಯೋಗಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಪರಂಪರೆ ಎಂದು ಕುರುಡು ಸಂಪ್ರದಾಯ ಮುಂದುವರಿಸುವ ಬದಲು ಅದಕ್ಕೆ ಅರ್ಥ ತಿಳಿಸುತ್ತಾ ಮುಂದುವರಿಸುತ್ತಿರುವ ಸಂಜೀವ ಸುವರ್ಣರು ಯಕ್ಷಗಾನ ಕ್ಷೇತ್ರಕ್ಕೆ “ಸುವರ್ಣ’ ಎಂದು ಅಭಿಪ್ರಾಯಪಟ್ಟರು.

ಕೋಟ ಶಿವರಾಮ ಕಾರಂತ ಅವರ ಪುತ್ರಿ, ಒಡಿಸ್ಸಿ ನೃತ್ಯ ವಿದುಷಿ ಕ್ಷಮಾ ರಾವ್‌ ಅಭಿನಂದಿಸಿ, ಕಾರಂತರು ಸಾಕಷ್ಟು
ಅಧ್ಯಯನ, ಆವಿಷ್ಕಾರ, ಸೌಂದರ್ಯ ಪ್ರಜ್ಞೆಯಿಂದ ಯಕ್ಷಗಾನ ಬ್ಯಾಲೆಯ ಮೂಲಕ ಯಕ್ಷಗಾನವನ್ನು ದೇಶ ವಿದೇಶಗಳಿಗೆ ಪರಿಚಯಿಸಿದರು.  ಸೌಂದರ್ಯಪ್ರಜ್ಞೆಯುಳ್ಳ ದೂರದೃಷ್ಟಿಯುಳ್ಳವರ ಪ್ರಯೋಗಗಳಿಂದ ಮಾತ್ರ ಕಲೆ ಮುಂದಿನ ಜನಾಂಗಕ್ಕೂ ಪರಭಾರೆಯಾಗಲು ಸಾಧ್ಯ ಎಂದರು.

ಪ್ರಶಸ್ತಿ ಸ್ವೀಕರಿಸಿದ ಬನ್ನಂಜೆ ಸಂಜೀವ ಸುವರ್ಣ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು. ಯಕ್ಷಗಾನ ಕೇಂದ್ರಕ್ಕೆ ಮಣಿಪಾಲದ ಮಾಧವ ಪೈ ಅವರ ಕೊಡುಗೆ, ಈಗ ಮಾಹೆಯ ಕೊಡುಗೆಯನ್ನು ಸ್ಮರಿಸಿಕೊಂಡರು. ಸಂಗೀತ ವಿದ್ವಾಂಸ ಟಿ.ಎಂ. ಕೃಷ್ಣ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್‌ ರಾವ್‌ ಸ್ವಾಗತಿಸಿದರು. ಅಭಿನಂದನ ಸಮಿತಿಯ ಅಧ್ಯಕ್ಷ ಡಾ| ಭಾಸ್ಕರಾನಂದ ಕುಮಾರ್‌ ಉಪಸ್ಥಿತರಿದ್ದರು. ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮಾರಕ ಯಕ್ಷಗಾನ ಕಲಾರಂಗ ಪ್ರಶಸ್ತಿಯಸ್ಥಾಪಕ ತಲ್ಲೂರು ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮುರಲಿ ಕಡೆಕಾರ್‌ ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿಯಿಂದ ಆರಂಭ
ಯಕ್ಷಗಾನ ಪ್ರಾರಂಭವಾದದ್ದು ಅದಮಾರು ಮಠದ ನರಹರಿ ತೀರ್ಥರಿಂದ. ಇದನ್ನು ನಾನು ಈ ಹಿಂದೊಮ್ಮೆ ಹೇಳಿದ್ದಾಗ ವಿವಾದ
ವಾಯಿತು. ಶಿವರಾಮ ಕಾರಂತರು ಅದನ್ನು ಒಪ್ಪಿದ ಬಳಿಕ ಬಗೆಹರಿಯಿತು. ಶ್ರೀಕೃಷ್ಣ ಮಠದ ಗೋಡೆಗಳಲ್ಲಿ ಶತಮಾನಗಳ ಹಿಂದಿ
ನಿಂದಲೂ ಯಕ್ಷಗಾನದ ವೇಷ ಚಿತ್ರಿಸಲಾಗಿದೆ. ಉತ್ಸವಗಳು ನಡೆಯುವಾಗ ಯಕ್ಷಗಾನದ ವೇಷಗಳಿರುತ್ತಿದ್ದವು ಎಂದರು ಬನ್ನಂಜೆ ಗೋವಿಂದಾಚಾರ್ಯ.

No Comments

Leave A Comment