Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ದಿಲ್ಲಿ ಕೋರ್ಟ್‌ ಚೇಂಬರ್‌ನಲ್ಲೇ ವಕೀಲನಿಂದ ವಕೀಲೆಯ ಮೇಲೆ ರೇಪ್‌

ಹೊಸದಿಲ್ಲಿ : ದಕ್ಷಿಣ ದಿಲ್ಲಿಯ ಸಾಕೇತ್‌ ಕೋರ್ಟ್‌ ಸಮುಚ್ಚಯದಲ್ಲಿನ ತನ್ನ ಚೇಂಬರ್‌ನಲ್ಲಿ ಹಿರಿಯ ನ್ಯಾಯವಾದಿಯೋರ್ವ ಮಹಿಳಾ ಲಾಯರ್‌ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರಿ ವಕೀಲನು ಪಾನಮತ್ತನಾಗಿದ್ದು ತನ್ನ ಚೇಂಬರ್‌ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ ಎಂದು ವಕೀಲೆ ನಿನ್ನೆ ಭಾನುವಾರ ದೂರು ನೀಡಿದ್ದಾರೆ ಎಂದು ಡಿವೈಎಸ್ಪಿ ರೋಮಿಲ್‌ ಬಾನಿಯಾ ತಿಳಿಸಿದ್ದಾರೆ. ಈ ಅತ್ಯಾಚಾರ ಕೃತ್ಯವು ಜು.14-15ರ ನಡುವೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆ ವಕೀಲೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಬಾನಿಯಾ ಹೇಳಿದರು.

ಅತ್ಯಾಚಾರ ನಡೆದ ಚೇಂಬರ್‌ ಸೀಲ್‌ ಮಾಡಲಾಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಕ್ರೈಮ್‌ ಬ್ರಾಂಚ್‌ ತಂಡದವರು ಜತೆಗೂಡಿ ಅದರ ತಪಾಸಣೆ ನಡೆಸತ್ತಿದ್ದಾರೆ.

ಆರೋಪಿ ವಕೀಲನು 50ರ ಹರೆಯದವನಾಗಿದ್ದು ಆತನನ್ನು ದಕ್ಷಿಣ ದಿಲ್ಲಿಯ ಸಂಗಂ ವಿಹಾರ್‌ನಲ್ಲಿ ಬಂಧಿಸಲಾಗಿ ಸಾಕೇತ್‌ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ ಎಂದು ಬಾನಿಯಾ ತಿಳಿಸಿದರು.

No Comments

Leave A Comment