Log In
BREAKING NEWS >
ಶ್ರೀಲಂಕಾ ಬಾಂಬ್‌ ಸ್ಫೋಟದಲ್ಲಿ ಮಂಗಳೂರಿನ ಮಹಿಳೆ ಸಾವು-ಭಾರತೀಯ ರಾಯಭಾರಿ ಕಛೇರಿ ಸಹಾಯವಾಣಿ ಸಂಖ್ಯೆಗಳು: +94777903082, +94112422788, +94112422789, +94777902082, ಮತ್ತು +94772234176

ನಕ್ಸಲರ ಹೊಂಚು ದಾಳಿ ; ಇಬ್ಬರು ಬಿಎಸ್‌ಎಫ್ ಯೋಧರು ಹುತಾತ್ಮ

ರಾಯ್‌ಪುರ್‌: ಛತ್ತೀಸ್‌ಘಡದ ಕಾಂಕೇರ್‌ನಲ್ಲಿ ಭಾನುವಾರ ನಡೆದ ನಕ್ಸಲರೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಬಿಎಸ್‌ಎಫ್ ಯೋಧರು ಹುತಾತ್ಮರಾಗಿದ್ದು, ಇನ್ನೋರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ.

114 ನೇ ಬೆಟಾಲಿಯನ್‌ನ ಯೋಧರು ಕೂಂಬಿಂಗ್‌ ಕಾರ್ಯಾಚರಣೆ ಮುಗಿಸಿ ವಾಪಾಸಾಗುತ್ತಿದ್ದ ವೇಳೆ ನಕ್ಸಲರು ಹೊಂಚು ದಾಳಿ ನಡೆಸಿದ್ದು, ಗುಂಡಿನ ಮಳೆಗರೆದಿದ್ದಾರೆ. ಯೋಧರೂ ಪ್ರತಿದಾಳಿ ನಡೆಸಿದರು ಇಬ್ಬರು ಗುಂಡು ತಗುಲಿ ಕೊನೆಯುಸಿರೆಳೆದಿದ್ದಾರೆ.

ಹುತಾತ್ಮ ಯೋಧರು ರಾಜಸ್ಥಾನದ ಲೋಕೆಂದರ್‌ ಸಿಂಗ್‌ ಮತ್ತು ಪಂಜಾಬ್‌ಭ ಮುಖದಿಯಾರ್‌ ಸಿಂಗ್‌ ಎಂದು ತಿಳಿದು ಬಂದಿದೆ.

No Comments

Leave A Comment